
ಗಂಗಾವತಿ: ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಅದರಡಿ ಸಿಲುಕಿದ್ದ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಶನಿವಾರ (ಅ.05) ತಾಲೂಕಿನ ಢಾಣಾಪುರ ಗ್ರಾಮದಲ್ಲಿ ನಡೆದಿದೆ.
ಪ್ರಕಾಶ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ಎನ್ನಲಾಗಿದೆ. ಕಳೆದ ರಾತ್ರಿ ಸುರಿದ ವ್ಯಾಪಕ ಮಳೆಯಿಂದಾಗಿ ಇಂದು ಬೆಳಗಿನ ಜಾವ ಮಣ್ಣಿನ ಮನೆ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದು ಈ ಅವಾಂತರ ಸಂಭವಿಸಿದೆ ಎನ್ನಲಾಗಿದೆ.
ವ್ಯಕ್ತಿಯ ಪರದಾಟ ಕಂಡು ತಕ್ಷಣವೇ ಅಕ್ಕಪಕ್ಕದವರು ಬಂದು ರಕ್ಷಿಸಿ, ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೇಲ್ಛಾವಣಿ ಕುಸಿದು ಅವರ ಮೇಲೆ ಬಿದ್ದಿದ್ದರಿಂದ ದೇಹದ ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು. ಗ್ರಾಮಸ್ಥರ ಹರಸಾಹಸದ ಬಳಿಕ ಪ್ರಕಾಶ್ ಅವರನ್ನು ಅಪಾಯದಿಂದ ಪಾರು ಮಾಡಲಾಗಿದೆ ಎಂದು ವರದಿಯಾಗಿದೆ.
Poll (Public Option)

Post a comment
Log in to write reviews