
ಬೆಂಗಳೂರು: ಸಿನಿಮಾ ಮಾಡುವ ಹೆಸರಿನಲ್ಲಿ ಉದ್ಯಮಿಯಿಂದ 40.ಲಕ್ಷ ಹನಿಟ್ರ್ಯಾಪ್ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮಾ ಮಾಡುವ ಹೆಸರಿನಲ್ಲಿ ಉದ್ಯಮಿಯಿಂದ ಹಣ ಪಡೆದು ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಗಣೇಶ್ ಅವರಿಗೆ ಕುಟುಂಬ ಎಂಬ ಆ್ಯಪ್‌ನಲ್ಲಿ ಕಾವ್ಯ ಎಂಬಾಕೆ ಪರಿಚಯವಾಗಿದ್ದಾಳೆ. ಈ ಕಾವ್ಯ ನಾಲ್ಕು ವರ್ಷಗಳ ಹಿಂದೆ ಸಿನಿಮಾ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾಳೆ.
ಆರೋಪಿ ಮಹಿಳೆ ಸಿನಿಮಾ ಮಾಡೋಣ, ನಾನು ಅದೇ ಫೀಲ್ಡ್‌ನಲ್ಲಿದ್ದೇನೆ ಎಂದು ಸುಳ್ಳು ಹೇಳಿ ಉದ್ಯಮಿ ಸ್ನೇಹ ಮಾಡಿದ್ದು. ಇದಾದ ಕೆಲ ದಿನಗಳ ನಂತರ ನಮ್ಮ ಡೈರೆಕ್ಟರ್‌ಗೆ ಹಣದ ಕಷ್ಟ ಇದೆ ಎಂದು ಹೇಳಿ ಉದ್ಯಮಿಯಿಂದ ನಾಲ್ಕು ಲಕ್ಷ ರೂ, ಹಣ ಪಡೆದಿದ್ದಾಳೆ. ನಂತರ ಹಣ ವಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನ ವೀಡಿಯೋ ಮಾಡಿಕೊಂಡಿದ್ದಾಳೆ.
Poll (Public Option)

Post a comment
Log in to write reviews