2024-12-24 07:02:51

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತವರಿಗೆ ಮರಳಿದ ಹಾಕಿ ತಂಡ: ಕಂಚು ವಿಜೇತರಿಗೆ ದಿಲ್ಲಿಯಲ್ಲಿ ಅದ್ದೂರಿ ಸ್ವಾಗತ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದ ಭಾರತ ಪುರುಷರ ಹಾಕಿ(Indian Men’s Hockey Team) ತಂಡ, ಪ್ಯಾರಿಸ್‌ನಲ್ಲಿ(paris olympics) ಮತ್ತೊಂದು ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಕಂಚು ಗೆದ್ದ ಸಾಧನೆ ಮಾಡಿದೆ. ಗುರುವಾರ (ಆಗಸ್ಟ್‌ 08) ನಡೆದಿದ್ದ ಕಂಚಿನ ಪದಕ ಸ್ಪರ್ಧೆಯಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಕಂಚು ತನ್ನದಾಗಿಸಿಕೊಂಡಿತು. ಇದೀಗ ಹಾಕಿ ತಂಡ ತನ್ನ ತವರಿಗೆ ಮರಳಿದೆ.

ಶನಿವಾರ ಬೆಳಗ್ಗೆ ನವದೆಹಲಿಗೆ ಬಂದ ಹಾಕಿ ತಂಡ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಕ್ರೀಡಾಭಿಮಾನಿಗಳು ಆಟಗಾರರಿಗೆ ಹಾರ ಹಾಗು ಸಿಹಿ ತಿನಿಸಿ ಅದ್ಧೂರಿ ಸ್ವಾಗತ ಕೋರಿ ಸಂಭ್ರಮಿಸಿದರು. ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಹಾಕಿ ತಂಡ 52 ವರ್ಷಗಳ ಬಳಿಕ ಸತತ 2 ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಭಾರತ ಈ ಮೊದಲು 1968ರ ಮೆಕ್ಸಿಕೋ ಹಾಗೂ 1972ರ ಮ್ಯೂನಿಚ್‌ ಒಲಿಂಪಿಕ್ಸ್‌ಗಳಲ್ಲಿ ಸತತವಾಗಿ 2 ಕಂಚು ಗೆದ್ದಿತ್ತು. 2021ರ ಟೋಕಿಯೋ ಹಾಗೂ ಈ ಬಾರಿ ಭಾರತ ಸತತವಾಗಿ ಕಂಚು ಗೆದ್ದಿದೆ.

ಹಾಕಿಗೆ ವಿದಾಯ ಹೇಳಿರುವ ಗೋಲ್​ ಕೀಪರ್​ ಪಿ.ಆರ್ ಶ್ರೀಜೇಶ್(PR Sreejesh)​ ಮಾತ್ರ ಪ್ಯಾರಿಸ್​ನಲ್ಲಿಯೇ ಉಳಿದಿದ್ದಾರೆ. ಸಮಾರೋಪ ಸಮಾರಂಭ(Paris Olympics 2024 Closing Ceremony)ದಲ್ಲಿ ಭಾರದ ಧ್ವಜಧಾರಿಯಾಗಿ( India’s Co-Flag Bearer) ಆಯ್ಕೆಯಾದ ಕಾರಣ ಅವರು ಈ ಸಮಾರಂಭ ಮುಗಿಸಿ ತವರಿಗೆ ಮರಳಲಿದ್ದಾರೆ. ಭಾನುವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ.

ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶನಿವಾರ 10ನೇ ದಿನ ಸ್ಪರ್ಧೆಗಳು ನಡೆಯಲಿವೆ. ಆ ದಿನ ಭಾರತಕ್ಕೆ ಹೆಚ್ಚಿನ ಸ್ಪರ್ಧೆಗಳು ಇಲ್ಲ. ಗಾಲ್ಫ್​ ಹಾಗೂ ಫ್ರೀಸ್ಟೈಲ್​ ಕುಸ್ತಿ ಬಿಟ್ಟರೆ ಬೇರೆ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಇಲ್ಲ.

ಶುಕ್ರವಾರ ಪುರುಷರ ಕುಸ್ತಿಯ 57 ಕೆ.ಜಿ ವಿಭಾಗದಲ್ಲಿ ಅಮನ್ ಗೆದ್ದ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್​ ಒಂದು ಪದಕ ಗೆದ್ದಿದ್ದಾರೆ.

Post a comment

No Reviews