
ತುಮಕೂರು: ಗೃಹ ಸಚಿವ ಜಿ. ಪರಮೇಶ್ವರ್ ಗೆ ಸಿಎಂ ಸ್ಥಾನ ಸಿಗಲಿ ಎಂದು ಎಲೆರಾಂಪುರ ಮಠದ ಹನುಮಂತನಾಥ ಸ್ವಾಮಿಜೀ ಅವರು ದಸರಾ ವೇದಿಕೆ ಮೇಲೆ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಖುರ್ಚಿಗಾಗಿ ಕೂಗು ಎದ್ದಿದೆ. ನನಗೂ ಒಂದು ಆಸೆ ಇದೆ, ನಮ್ಮ ಜಿಲ್ಲೆಗೆ ಸಿಎಂ ಸ್ಥಾನ ಬರುವ ದಿನಗಳು ಬರಲಿ ಎಂದು ಹನುಮಂತನಾಥ ಸ್ವಾಮಿಜೀ ಅವರು ಪರೋಕ್ಷವಾಗಿ ನುಡಿದಿದ್ದಾರೆ.
ಪರಮೇಶ್ವರ್ ಹೆಸರೇಳದೇ ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ ಎಂದಿದ್ದಾರೆ. ನಮ್ಮ ಜಿಲ್ಲೆಗೆ ಒಂದು ಅವಕಾಶ ಸಿಗಲಿ ಎಂದು ಸಿಎಂ ಸ್ಥಾನಕ್ಕೆ ಪರಮೇಶ್ವರ್ ಹೆಸರು ಸೂಚಿಸಿದ್ದಾರೆ. ನಮ್ಮ ಜಿಲ್ಲೆಗೂ ಸಿಎಂ ಸ್ಥಾನ ಒದಗಿ ಬರಲಿ, ಯಾರು ಕೂಡ ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ನಮ್ಮ ಜಿಲ್ಲೆ ಕೂಡ ಸಾಕಷ್ಟು ಕೊಡುಗೆ ಕೊಟ್ಟಿದೆ ಎಂದು ಪರಮೇಶ್ವರ್ ಪಕ್ಕದಲ್ಲಿ ನಿಂತುಕೊಂಡೇ ಸ್ವಾಮಿಜಿ ಹೇಳಿದ್ದಾರೆ.
Poll (Public Option)

Post a comment
Log in to write reviews