ಕರ್ನಾಟಕ
SC-ST ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಹೆಚ್.ಎಂ.ರೇವಣ್ಣ ತಿರುಗೇಟು

ಬೆಂಗಳೂರು: SC-ST ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಹೆಚ್.ಎಂ.ರೇವಣ್ಣ, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ SC-ST ಹಣವನ್ನು ಖರ್ಚು ಮಾಡಲೇ ಇಲ್ಲ. ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಅಂತಾ ಪ್ರಶ್ನಿಸಿದ್ದಾರೆ.
SC-ST ಸಮುದಾಯದವರಿಗೆ ರಸ್ತೆ ಸೇರಿದಂತೆ ಹಲವು ಸೌಲಭ್ಯಗಳು ಸಿಕ್ತಿವೆ. ಆ ಸಮುದಾಯದವರಿಗೇ ಹಣ ಬಳಕೆ ಆಗಿದ್ದು, ಫಲಾನುಭವಿಗಳಿದ್ದಾರೆ ಹಾಗಾಗಿ ಆ ಹಣ ಉಪಯೋಗಿಸಿದ್ರೆ ತಪ್ಪೇನು. ಇನ್ನೂ ಶಕ್ತಿ ಯೋಜನೆಯಲ್ಲಿ ಹೆಣ್ಣು ಮಕ್ಕಳು ಬಸ್ಸಲ್ಲಿ ಓಡಾಡುತ್ತಿಲ್ಲವೇ? ನಾವು ಆ ಸಮುದಾಯದ ಏಳಿಗೆಗೆ ಹಣ ಖರ್ಚು ಮಾಡಿದ್ದೇವೆ ಎಂದಿದ್ದಾರೆ.
Poll (Public Option)

Post a comment
Log in to write reviews