
ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆಗಮಿಸಿದ ಹಿರಣ್ಯ ಎಂಬ ಆನೆ ಚಿತ್ರಾಲಂಕಾರದ ಬಳಿಕ ಬೆದರಿ ಅಡ್ಡಾದಿಡ್ಡಿ ಓಡಾಡಿದೆ.
ಶ್ರೀರಂಗಪಟ್ಟಣಕ್ಕೆ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಎಂಬ 3 ಆನೆಗಳು ಆಗಮಿಸಿವೆ. ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹಿರಣ್ಯ ಆನೆ ಹೆಜ್ಜೆ ಹಾಕಲಿದೆ. ಈ ಆನೆಗೆ ಕುಮ್ಕಿ ಆನೆಯಾಗಿ ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳು ಹೆಜ್ಜೆ ಹಾಕಲಿದೆ. ಆನೆಗಳಿಗೆ ಚಿತ್ರಾಲಂಕಾರದ ಮಾಡಿದ ಬಳಿಕ ಹಿರಣ್ಯ ಎಂಬ ಆನೆ ಬೆದರಿ ಅಡ್ಡಾದಿಡ್ಡಿ ಓಡಾಡಿದೆ.
ಜನರು ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿದ್ದಾರೆ. ಈ ವೇಳೆ ಎಚ್ಚೆತ್ತ ಮಾವುತರು, ಕಾವಾಡಿಗರು ಭಾರೀ ಅನಾಹುತ ತಪ್ಪಿಸಿದ್ದಾರೆ. ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಕೂಡಲೇ ಎಚ್ಚೆತ್ತ ಮಾವುತರು ಹಾಗೂ ಕಾವಾಡಿಗರು ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.
Poll (Public Option)

Post a comment
Log in to write reviews