
ಗಾಝಾ: ಹಿಜ್ಬುಲ್ಲಾ ನಮ್ಮ ಸೇನಾ ನೆಲೆ ಮೇಲೆ ಡ್ರೋನ್ ದಾಳಿ ಮಾಡಿ ನಾಲ್ವರು ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಭಾನುವಾರ ಸಂಜೆ ಬಿನ್ಯಾಮಿನಾ ಸಿಟಿಯ ಸೇನಾ ನೆಲೆ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ 7 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇಸ್ರೇಲ್ ಲೆಬನಾನ್ ಮೇಲೆ ಭೂ ದಾಳಿ ಮಾಡಿದ ನಂತರ ಹಿಜ್ಬುಲ್ಲಾ ಕಡೆಯಿಂದ ನಡೆದ ಈ ದಾಳಿ ಅತ್ಯಂತ ದೊಡ್ಡದು ಎಂದು ವಿಶ್ಲೇಷಿಸಲಾಗಿದೆ.
ಗುರುವಾರ ಇಸ್ರೇಲ್ ನಡೆಸಿದ ದಾಳಿಗೆ ಲೆಬನಾನ್ನ 22 ಜನ ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾ ತಿಳಿಸಿದೆ.
Poll (Public Option)

Post a comment
Log in to write reviews