ಕೃಷಿ ಕೇವಲ ವೃತ್ತಿಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಧರ್ಮವಾಗಿದೆ.ಇತ್ತೀಚಿನ ದಿನಗಳಲ್ಲಿ ಯುವಕರು ನಗರದತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಗಳು ವೃದ್ದಾಶ್ರಮಗಳಾಗಿ ಬದಲಾಗುತ್ತಿದೆ.
ಕೃಷಿ, ತೋಟಗಾರಿಕೆ ಕ್ಷೇತ್ರದಿಂದ ಯುವ ಸಮುದಾಯ ಹಿಂದೆ ಸರಿಯುತ್ತಿದೆ.ಇದಕ್ಕೆ ನಗರಿಕರಣ ಮುಖ್ಯ ಕಾರಣ ಅಂತ ಹೇಳಬಹುದು. ಸೀಮಿತ ವರ್ಗದವರು ಇಂದಿಗೂ ಕೃಷಿಯನ್ನು ಅವಲಂಬಿಸಿದ್ದಾರೆ. ಸಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಕೆ, ಕೃಷಿ ಬಗ್ಗೆ ಜ್ಞಾನದ ಕೊರತೆ ಇರುವುದರಿಂದ ಕೃಷಿಯಲ್ಲಿ ಆದಾಯ ಕಡಿಮೆ ಆಗುತ್ತಿದೆ.
ರೈತರಿಗೆ ಅಗತ್ಯ ಜ್ಞಾನ ನೀಡುವ ನಿಟ್ಟಿನಲ್ಲಿ ನಮ್ಮ ಸಮಯ ವಾಹಿನಿ ಪ್ರಯತ್ನ ಮಾಡುತ್ತಿದ್ದು jkvk ಕೃಷಿ ತಜ್ಞ ತಿಮ್ಮೆಗೌಡರವರು ಯಾವ್ಯಾವ ತಿಂಗಳಲ್ಲಿ ಯಾವ್ಯಾವ ಕೃಷಿ ಬೆಳೆಯಬಹುದೆಂದು ಅಗತ್ಯ ಮಾಹಿತಿ ಒದಗಿಸಿದ್ದಾರೆ.
ತಿಂಗಳು ಮತ್ತು ಬೆಳೆಗಳು
ಮೇ
ಎಳ್ಳು, ಅಲಸಂದೆ, ತೊಗರಿ, ಹರಳು, ಜೋಳ
ಜೂನ್
ತೊಗರಿ, ಕಡಲೆಕಾಯಿ, ಹರಳು, ರಾಗಿ, ಮುಸುಕಿನ ಜೋಳ
ಜುಲೈ
ಮುಸುಕಿನ ಜೋಳ, ಕಡಲೆಕಾಯಿ, ರಾಗಿ, ಅವರೆ, ಹರಳು, ಕಾಳಿನ ದಂಟು
ಆಗಸ್ಟ್
ರಾಗಿ, ಕಾಳಿನ ದಂಟು, ಸೂರ್ಯಕಾಂತಿ, ಅಲಸಂದೆ, ಅವರೆ, ನವಣೆ, ಹಾರಕ, ಸಾಮೆ, ಹುಚ್ಚೆಳ್ಳು
ಸೆಪ್ಟೆಂಬರ್
ಅಲಸಂದೆ, ಹುರುಳಿ, ನಾಟಿ ರಾಗಿ, ನವಣೆ, ಅವರೆ, ಹಾರಕ, ಸಾವೆ
ಹೀಗೆ ಅಗತ್ಯ ಜ್ಞಾನದೊಂದಿಗೆ ಮಾಸಕ್ಕೆ ಅನುಗುಣವಾಗಿ ಬೆಳೆಗಳನ್ನ ಬೆಳೆದದ್ದೇ ಆದರೆ ಕೃಷಿ ನಮ್ಮ ಕೈ ಹಿಡಿಯುವುದು.
Post a comment
Log in to write reviews