ಟಾಪ್ 10 ನ್ಯೂಸ್
ಎಣ್ಣೆಯ ತ್ವಚೆ ಮತ್ತು ಮುಖದ ಮೇಲಿನ ಅತಿಯಾದ ಮೊಡವೆ ನಿಯಂತ್ರಣಕ್ಕೆ ಇಲ್ಲಿದೆ ಮನೆ ಮದ್ದು.

ಎಣ್ಣೆ ತ್ವಚೆ ಇರುವವರಿಗೆ ಅನೇಕ ಸೌಂದರ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ ಬೇಗನೆ ಎಣ್ಣೆಯಾಗುವುದರಿಂದ ಮುಖದ ಫ್ರೆಶ್‌ನೆಸ್ ಮೇಕಪ್ ಮಾಡಿದ ಒಂದು ಗಂಟೆಯ ಒಳಗೆ ಇಲ್ಲವಾಗುವುದು. ಮುಖ ಎಣ್ಣೆ-ಎಣ್ಣೆಯಾಗಿ ಡಲ್ ಆಗಿ ಕಾಣಿಸುವುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಟ್ರೈ ಮಾಡಿ ನೋಡಿ.
ಒಂದು ಚಿಕ್ಕ ಬೌಲ್‌ಗೆ ಎರಡು ಚಮಚ ಜೇನು ತುಪ್ಪ ಮತ್ತು ಎರಡು ಸಮಚ ನಿಂಬೆರಸ ಒಂದು ಚಮಚ ಅರಿಶಿಣ ಪುಡಿ ಹಾಕಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ 15-20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಮುಖ ಒರೆಸಿ.
ಈ ಫೇಸ್‌ಮಾಸ್ಕ್ ಅನ್ನು ದಿನಕ್ಕೊಮ್ಮೆ ಬಳಸಬಹುದು.
ನಿಂಬೆರಸ ಬ್ಲ್ಯಾಕ್‌ಹೆಡ್ಸ್ ಇಲ್ಲವಾಗಿಸುತ್ತದೆ, ಜೇನು ತ್ವಚೆ ಆರೈಕೆಯನ್ನು ಮಾಡಿ, ಮುಖದ ಕಾಂತಿ ಹೆಚ್ಚಿಸುವುದು.
Poll (Public Option)

Post a comment
Log in to write reviews