ಕೆಂಪು ಬಣ್ಣದ ಹೊಳೆಯುವ ತುಟಿ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೋಡುಗರನ್ನು ನಮ್ಮತ್ತ ಆಕರ್ಷಿಸುತ್ತದೆ. ತುಟಿಯ ಬಣ್ಣ ಕಪ್ಪಾದರೆ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ. ಮೆಲನಿನ್ ಶೇಖರಣೆ ಹೆಚ್ಚಾದರೆ ಹೀಗಾಗುತ್ತದೆ. ಬಿಸಿಲಲ್ಲಿ ಹೆಚ್ಚು ಓಡಾಡಿದಾಗ, ಸಿಗರೇಟು ಸೇವನೆ ಅಭ್ಯಾಸ ಹೆಚ್ಚಿರುವವರಿಗೆ ಹೀಗಾಗುತ್ತದೆ. ನಮ್ಮ ಆಹಾರ ಮತ್ತು ಜೀವನಶೈಲಿಯಿಂದ ಕೂಡ ಮೆಲನಿನ್ ಅಂಶ ಹೆಚ್ಚಾಗಬಹುದು. ತುಟಿಯ ಆರೋಗ್ಯ ಮತ್ತು ಸೌಂದರ್ಯವನ್ನು ಮನೆಯ ಮದ್ದಿನಿಂದಲೇ ಕಾಪಾಡಬಹುದು.
ಪಪ್ಪಾಯಿ: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪಪ್ಪಾಯಿ ಗಿಡ ಇರುತ್ತದೆ. ಇನ್ನು ಸಿಟಿಯಲ್ಲಿ ರುವವರಿಗೆ ಪಪ್ಪಾಯಿ ಹಣ್ಣು ಸಿಗುತ್ತದೆ. ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಚಿಕ್ಕದಾಗಿ ಕತ್ತರಿಸಿಕೊಂಡು ಚೆನ್ನಾಗಿ ರುಬ್ಬಿಕೊಂಡು ಒಂದು ಚಮಚ ರೋಸ್ ವಾಟರ್ ನ್ನು ಅದಕ್ಕೆ ಬೆರೆಸಿ ಮಿಶ್ರಣ ಮಾಡಿ ತಯಾರಿಸಿ ಪ್ರತಿದಿನ ರಾತ್ರಿ ಮಲಗುವ ಮೊದಲು ಅರ್ಧ ಗಂಟೆ ಬಿಟ್ಟು ತೊಳೆದುಕೊಳ್ಳಿ. ಅಥವಾ ಹಗಲು ಹೊತ್ತಿನಲ್ಲಿ ಫ್ರೀಯಾಗಿದ್ದರೆ ಸಹ ಹಚ್ಚಿ ನಂತರ ಬಿಸಿನೀರಿನಿಂದ ತೊಳೆಯಬಹುದು, ಅಥವಾ ಟಿಶ್ಯೂ ಪೇಪರ್ ನಿಂದ ಒರೆಸಿಕೊಳ್ಳಬಹುದು.
ನಿಂಬೆ ರಸ: ಲಿಂಬೆರಸದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ತ್ವಚೆಯ ಕಲೆಗಳನ್ನು ನಿವಾರಣೆ ಮಾಡಲು ತುಂಬಾ ಸಹಾಯವಾಗುತ್ತದೆ. ನಿಂಬೆಹಣ್ಣನ್ನು ಕತ್ತರಿಸಿಕೊಂಡು ಅರ್ಧ ನಿಂಬೆಯನ್ನು ಚೆನ್ನಾಗಿ ತುಟಿಗೆ ಹಚ್ಚಿ ಹಾಗೇ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದರೆ ಕಪ್ಪು ಕಲೆಗಳು ನಿವಾರಣೆಆಗುತ್ತದೆ.
ಬೀಟ್ ರೂಟ್" ಮನೆಯಲ್ಲಿರುವ ಬೀಟ್ ರೂಟ್ ನಿಂದ ಕೂಡ ತುಟಿಗೆ ಪರಿಹಾರವಿದೆ. ಅದನ್ನು ಚಿಕ್ಕದಾಗಿ ಕತ್ತರಿಸಿಕೊಂಡು ತುಂಡನ್ನು ಚೆನ್ನಾಗಿ ತುಟಿಗಳಿಗೆ ಹಚ್ಚಿಕೊಳ್ಳುವು ದರಿಂದ ಸಹಜವಾಗಿ ತುಟಿ ಕೆಂಪಾಗುತ್ತಾ ಹೋಗುತ್ತದೆ.
ಅಲೋವೆರಾ: ಇದು ತುಟಿ ಮತ್ತು ಮುಖದಲ್ಲಿರುವ ಯಾವುದೇ ಕಲೆಗಳನ್ನು ನಿವಾರಣೆ ಮಾಡುತ್ತದೆ. ತುಟಿಯ ಭಾಗ ಹೆಚ್ಚು ಕಪ್ಪಾಗಿದ್ದರೆ ಅಲೋವೆರವನ್ನು ಕತ್ತರಿಸಿ ಅದರೊಳಗಿರುವ ಜೆಲ್ ನ್ನು ಚೆನ್ನಾಗಿ ಹಚ್ಚಿ ಕೆಲ ಹೊತ್ತಿನ ನಂತರ ತೊಳೆಯಿರಿ.
ತುಟಿಗಳ ಆರೈಕೆ
- ರಾತ್ರಿ ಮಲಗುವ ಮುನ್ನ ಲಿಪ್ ಬಾಮ್ ನ್ನು ಹಚ್ಚುವುದು, ಆಗಾಗ ಮಾಯಿ ಶ್ಚರೈಸ್ ಮಾಡಿಕೊಳ್ಳುವುದು, ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆದು ಲಿಪ್ ಬಾಮ್ ಹಚ್ಚಿಕೊಳ್ಳುವುದು ತುಂಬಾ ಉತ್ತಮ.
- ಹಾಲಿನ ಕೆನೆ, ತುಪ್ಪ, ಜೇನುತುಪ್ಪ: ಶುದ್ಧವಾದ ಹಾಲಿನ ಕೆನೆ, ತುಪ್ಪ ಅಥವಾ ಜೇನುತುಪ್ಪ ಹಚ್ಚುವುದರಿಂದ ತುಟಿ ಮಾಯಿಶ್ಚರೈಸರ್ ಆಗಿ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.
Post a comment
Log in to write reviews