
ಬಾಗಲಕೋಟೆ: ಸಮಾಜದಲ್ಲಿ ಮಹಿಳೆಯರಿಗೆ ದೈರ್ಯ ತುಂಬುವ ಸಲುವಾಗಿ ಶ್ರೀ ರಾಮ್ ಸೇನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರ ಪ್ರಮೋದ್ ಮುತಾಲಿಕ ಅವರ ಸಂಘಟನೆಯ ವತಿಯಿಂದ ಮಹಿಳೆಯರಿಗಾಗಿ ಸಹಾಯವಾಣಿ ಸಂಖ್ಯೆಯನ್ನ ಬಾಗಲಕೋಟೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆಮಾಡಿದೆ.
ನಮಗೆ ಸ್ವತಂತ್ರ ಸಿಕ್ಕು ಎಷ್ಟೋ ವರ್ಷ ಕಳೆದರೂ ಮಹಿಳೆಯರು ಈಗಿನ ಸಮಯದಲ್ಲಿ ಒಬ್ಬಂಟಿ ಆಗಿ ಓಡಾಡುವುದು ಕಷ್ಟಕರ ಪರಿಸ್ಥಿತಿ ಇದೆ. ಅದನ್ನು ಹೋಗಲಾಡಿಸುವ ಸಲುವಾಗಿ, ಮಹಿಳೆಯರಿಗೆ ದೈರ್ಯ ತುಂಬುವ ಉದ್ದೇಶದಿಂದ ಶ್ರೀ ರಾಮ್ ಸೇನೆ ಸಂಘಟನೆಯು ಸಹಾಯವಾಣಿ ಸಂಖ್ಯೆಯನ್ನ ಬಿಡುಗಡೆಮಾಡಿದೆ. ಈ ಸಂದರ್ಭದಲ್ಲಿ ಶ್ರೀ ರಾಮ್ ಸೇನೆ ರಾಜ್ಯ ಸಂಘಟನೆಯ ಪಧಾಧಿಕಾರಿಗಳಾದ ಶ್ರೀ ಮಾಲಿಂಗಪ್ಪ ಅವರು ಈ ವಿಷಯ ಕುರಿತು ತಿಳಿಸಿದ್ದಾರೆ. ರಾಜ್ಯ ಪದಾಧಿಕಾರಿಗಳಾದ ಶಹಾಜಿ ಪವಾರ, ರವಿ ಪೂಜಾರ, ಶ್ರೀಗಳು ವಿಶ್ವ ಕರ್ಮ ಮಠ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಬಾಗಲಕೋಟೆ ತಾಲೂಕಿನ ದುರ್ಗಾ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಶ್ರೀಶೈಲ್ ತೋಳಮಟ್ಟಿ ಮತ್ತು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
Poll (Public Option)

Post a comment
Log in to write reviews