
ಬೆಂಗಳೂರು : ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೊಪ್ಪಳ, ರಾಯಚೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರದಲ್ಲಿ ಕೂಡ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.
ಹೊನ್ನಾವರ, ಗೋಕರ್ಣ, ಸಿದ್ದಾಪುರ, ಅಥಣಿ, ವಿಜಯಪುರ, ಮಂಕಿ, ಶಿರಾಲಿ, ಕುಂದಾಪುರ, ಬಸವನ ಬಾಗೇವಾಡಿ, ರಬಕವಿ, ಸುಳ್ಯ, ಕುಮಟಾ, ಕೂಡಲಸಂಗಮ, ಮಾಣಿ, ಕೋಟಾ, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಔರಾದ್, ಮುದ್ದೇಬಿಹಾಳ, ಕೊಟ್ಟಿಗೆಹಾರ, ಕಾರ್ಕಳ, ಅಂಕೋಲಾ, ಪಣಂಬೂರು, ಕಾರವಾರ, ಯಲಬುರ್ಗಾ, ಮಹಾಲಿಂಗಪುರ, ಮುದಗಲ್, ಕವಡಿಮಟ್ಟಿ, ಧಾರವಾಡ, ಜಯಪುರ, ವೈಎನ್ ಹೊಸಕೋಟೆ, ಗೇರುಸೊಪ್ಪದಲ್ಲಿ ಮಳೆಯಾಗಿದೆ.
Poll (Public Option)

Post a comment
Log in to write reviews