2024-12-24 07:16:23

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕರ್ನಾಟಕದಲ್ಲಿ 18-20 ವರೆಗೆ ಅಧಿಕ ಮಳೆ : ಹವಮಾನ ಇಲಾಖೆ ಮುನ್ಸೂಚನೆ

ಕರ್ನಾಟಕದಲ್ಲಿ ಮೇ 18ರಿಂದ 20ರವರೆಗೆ ಭಾರೀ ಮಳೆ ಆಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಈ ಮೂರು ದಿನಗಳ ಕಾಲ ಕರ್ನಾಟಕದ ದಕ್ಷಿಣದಲ್ಲಿ 115.5-204.5 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದ್ದಲ್ಲದೆ, ಆರೆಂಜ್‌ ಅಲರ್ಟ್‌ ಅನ್ನೂ ಘೋಷಿಸಿದೆ.

ಜನರು ಆದಷ್ಟು ಸುರಕ್ಷಿತವಾಗಿರುವಂತೆಯೂ ತಿಳಿಸಿದೆ. ಅದೇ ರೀತಿ ನೆರೆಯ ರಾಜ್ಯ ತಮಿಳುನಾಡಿಗೆ ಭಾರೀ ಮಳೆಯ ರೆಡ್‌ ಅಲರ್ಟ್‌ಅನ್ನು ಸರ್ಕಾರ ನೀಡಿದೆ.

ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮೇ 16ರಂದು 204.5 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೇ 17ರಿಂದ 20ರ ಒಳಗೆ  115.5-204.5 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

2024 ರ ಮೇ 22ರವರೆಗೆ ದಕ್ಷಿಣ ಪೆನಿನ್ಸುಲಾರ್ ಭಾರತದಲ್ಲಿ ಮುಂದುವರಿಯುವ ಸಾಧ್ಯತೆಯಿರುವ ಆರ್ದ್ರ ವಾತಾವರಣವು ಭಾರೀ ಮಳೆಗೆ ಕಾರಣವಾಗಬಹುದು ಎಂದು ಅಂದಾಜಿಸಿದೆ. 6 ಮತ್ತು 20 ರಂದು ತಮಿಳುನಾಡಿನಲ್ಲಿ ಮತ್ತು ಮೇ 20 ರಂದು ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

Post a comment

No Reviews