
ಹುಣಸೂರಿನ ಹನಗೋಡಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಜನರು ತತ್ತರಿಸಿದ್ದಾರೆ. ರಾತ್ರಿ ಸುರಿದ ಮಳೆಗೆ ಅಪಾರ ಹಾನಿ ಉಂಟಾಗಿದೆ. ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಮನೆಯೊಳಗೆ ನುಗ್ಗಿದ ನೀರನ್ನ ಹೊರಹಾಕಲು ಜನರು ಪಡಬಾರದ ಕಷ್ಟ ಪಡುತಿದ್ದಾರೆ. ಹಲವಾರು ಮನೆಗಳಲ್ಲಿ ಗೋಡೆ ಕುಸಿದು ನೆಲೆ ಇಲ್ಲದೆ ಜನರು ನರಳಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಜಲಪಾತದಂತೆ ನೀರು ಹರಿಯುತ್ತಿದೆ. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಸರಾಗವಾಗಿ ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆ ಅನುಭವಿಸುತಿದ್ದಾರೆ. ಬಸ್ ನಿಲ್ದಾಣ ಕೆರೆಯಂತಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Poll (Public Option)

Post a comment
Log in to write reviews