
ಉತ್ತರಪ್ರದೇಶ: ದೇಶದೆಲ್ಲೆಡೆ ಮಾನ್ಸೂನ್ ಮುಂಗಾರು ಆರ್ಭಟಿಸುತ್ತಿದ್ದು, ಭಾರತೀಯ ಹವಮಾನ ಇಲಾಖೆ ವರದಿ ಪ್ರಕಾರ ಮುಂದಿನ ನಾಲ್ಕೈದು ದಿನಗಳವರೆಗೆ ವಾಯುವ್ಯ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ನೈರುತ್ಯ ಮಾನ್ಸೂನ್ ಪಶ್ಚಿಮ ರಾಜಸ್ಥಾನ ಮತ್ತು ಹರಿಯಾಣದ ಕೆಲವು ಭಾಗಗಳು, ಉತ್ತರ ಪ್ರದೇಶದ ಕೆಲವು ಭಾಗಗಳು ಪಂಜಾಬ್ ನ ಕೆಲವು ಭಾಗಗಳು ಮತ್ತು ಹಿಮಾಲಯ ಪ್ರದೇಶ ಜಮ್ಮು ವಿನ ಕೆಲವು ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿರಲಿದೆ ಎಂದು ಇಲಾಖೆ ತಿಳಿಸಿದೆ.
ಜುಲೈ 3 ಮತ್ತು 4ರಂದು ಪಂಜಾಬಿನ ವಿವಿಧ ಸ್ಥಳದಲ್ಲಿ ಭಾರೀ ಮಳೆ ಆಗುವ ಸಾಧ್ಯತೆಯಿದ್ದು ,ಹರಿಯಾಣ ಚಂಡಿಗಡದಲ್ಲಿ ಜುಲೈ 4 ರಂದು, ಹಿಮಾಚಲ ಪ್ರದೇಶದಲ್ಲಿ ಜುಲೈ 3ಮತ್ತು 4ರಂದು, ಪೂರ್ವ ರಾಜಧಾನಿಯಲ್ಲಿ ಜುಲೈ 2 ರಿಂದ ಜುಲೈ 4ರ ವರೆಗೆ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
Poll (Public Option)

Post a comment
Log in to write reviews