
ಗಜೇಂದ್ರಗಡ: ಗದಗದಲ್ಲಿ ಮಳೆ ಆರ್ಭಟ ಜೋರಾಗಿದೆ. ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಅಮರೇಶ್ವರ, ಕಾಲಕಾಲೇಶ್ವರ, ಕಣವಿ ಈರಣ್ಣ ಬೆಟ್ಟದಲ್ಲಿ ಮಳೆ ನೀರು ಝರಿಯಂತೆ ಹರಿಯುತ್ತಿದೆ.
ಈ ದೃಶ್ಯ ನೋಡಲು ಜನರು ಮುಗಿಬಿದ್ದಿದ್ದಾರೆ. ಇನ್ನೊಂದೆಡೆ ಹೊಲ ಗದ್ದೆಗಳಲ್ಲಿ, ವಿಪರೀತ ನೀರು ನಿಂತಿರುವುದರಿಂದ ರೈತರ ಮುಂಗಾರು ಬಿತ್ತನೆ ವಿಳಂಬವಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆಯೂ ಕೂಡ ಹಾನಿಗೊಳಗಾಗಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
Poll (Public Option)

Post a comment
Log in to write reviews