
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಇಂದಿನಿಂದ ಮುಂದಿನ 03 ದಿನಗಳವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಲವೆಡೆ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-22, ಮಂಗಳೂರು: 30-26, ಶಿವಮೊಗ್ಗ: 22-23, ಬೆಳಗಾವಿ: 34-23, ಮೈಸೂರು: 30-22, ಮಂಡ್ಯ: 31-22, ಮಡಿಕೇರಿ: 24-18, ರಾಮನಗರ: 29-22, ಹಾಸನ: 27-21, ಚಾಮರಾಜನಗರ: 29-22, ಚಿಕ್ಕಬಳ್ಳಾಪುರ: 28-22, ಕೋಲಾರ: 28-22, ತುಮಕೂರು: 29-22, ಉಡುಪಿ:30-25, ಕಾರವಾರ: 32-27, ಚಿಕ್ಕಮಗಳೂರು: 25-19, ದಾವಣಗೆರೆ: 31-24, ಹುಬ್ಬಳ್ಳಿ: 33-24, ಚಿತ್ರದುರ್ಗ: 30-22, ಹಾವೇರಿ: 32-24, ಬಳ್ಳಾರಿ: 33-26, ಗದಗ: 34-24, ಕೊಪ್ಪಳ: 33-25, ರಾಯಚೂರು: 34-26, ಯಾದಗಿರಿ: 36-27, ವಿಜಯಪುರ: 37-26, ಬೀದರ್: 33-25, ಕಲಬುರಗಿ: 35-26, ಬಾಗಲಕೋಟೆ: 37-26.
Poll (Public Option)

Post a comment
Log in to write reviews