
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಪ್ತ ನಾಗರಾಜು ಬಂಧನವಾಗಿದೆ. ಈತ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯನಾಗಿದ್ದಲ್ಲದೆ, ಕುರುಬರ ಸಂಘಕ್ಕೆ ನಿರ್ದೇಶಕನೂ ಆಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಕೊಲೆ ಪ್ರಕರಣದಲ್ಲಿ ನಾಗರಾಜು ಅಲಿಯಾಸ್ ನಾಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಕೊಲೆಯಾದ ರೇಣುಕಾ ಸ್ವಾಮಿಯನ್ನು ಈತನೇ ಚಿತ್ರದುರ್ಗದಿಂದ ಕರೆಸಿಕೊಂಡಿದ್ದು.
ನಾಗರಾಜ್ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ. ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿ ಆಯ್ಕೆ ಆಗಿದ್ದ. ಅಷ್ಟೆ ಅಲ್ಲದೆ ಮಹಾನಗರ ಪಾಲಿಕೆ 21ನೇ ವಾರ್ಡ್‌ನಿಂದ ಸ್ಪರ್ಧಿಸಲು ದರ್ಶನ್ ಮೂಲಕವೇ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ. ಇವನು ಮೂಲತಃ ಮೈಸೂರು ನಗರದ ಟಿ.ಕೆಲೇಔಟ್ ನಿವಾಸಿಯಾಗಿದ್ದು ಪೆಟ್ರೊಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ.
ಸ್ನೇಹಿತರ ಮೂಲಕ ದರ್ಶನ್ ಆಪ್ತವಲಯಕ್ಕೆ ಎಂಟ್ರಿಕೊಟ್ಟಿದ್ದ ಈತ ಕಳೆದ 15 ವರ್ಷದಿಂದ ದರ್ಶನ್ ಜತೆಯಲ್ಲೇ ಇದ್ದು ಊಟ, ತಿಂಡಿ, ವಾಸ್ತವ್ಯ, ಪ್ರವಾಸ, ಮೋಜು, ಮಸ್ತಿ, ವೈಯಕ್ತಿಕ ವಿಚಾರಗಳೆಲ್ಲವನ್ನೂ ನೋಡಿಕೊಳ್ಳುತ್ತಿದ್ದ.
ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆಯ ನಿರ್ವಹಣೆ ಕೂಡ ನಾಗರಾಜ್‌ನ ಜವಾಬ್ದಾರಿಯಲ್ಲಿತ್ತು. ಅಷ್ಟೇ ಅಲ್ಲ ಅಭಿಮಾನಿ ಸಂಘಗಳಿಗೆಲ್ಲ ನಾಗ ಸಂಪರ್ಕ ಸೇತುವೆಯಾಗಿದ್ದ. ದರ್ಶನ್ ಅತಿಯಾಗಿ ನಂಬುತ್ತಿದ್ದ ವ್ಯಕ್ತಿ ಇವನಾಗಿದ್ದ . ಈಗ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ
Poll (Public Option)

Post a comment
Log in to write reviews