
ನನಗೆ ಗೃಹಸಚಿವರು ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಪ್ತರು ಎಂದು ಹೇಳಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಕಳ್ಳನೊಬ್ಬನನ್ನು ಕೆಂಗೇರಿ ಪೊಲೀಸರು ಬಂದಿಸಿದ್ದಾರೆ.
ಮಹಮದ್ ಝಬೇರ್ ಅಲಿಯಾಸ್ ೪೨೦ ಝಬೇರ್ ಬಂದಿತ ಆರೋಪಿ.
ಮಹಮಧ್ ಝಬೇರ್ ಎಂಬಾತ ನನಗೆ ರಾಜಕೀಯ ವ್ಯಕ್ತಿಗಳು ಗೊತ್ತು ಗೃಹ ಸಚಿವ ಪರಮೇಶ್ವರ್ ರವರ ಪಿ ಎ ನನಗೆ ಪರಿಚಯ ಎಂದು ಅಮಾಯಕರನ್ನು ನಂಬಿಸುತ್ತಿದ್ದನು. ಹಾಗೆಯೇ ಬೆಂಗಳೂರು ಮೂಲದ ಕೆಲ ದೊಡ್ಡ ದೊಡ್ಡ ಅಧಿಕಾರಿಗಳ ಸಹಿಯನ್ನೇ ನಕಲು ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಕಡಿಮೆ ಬೆಲೆಗಳಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಗಳು, ಇಂಡಸ್ಟ್ರಿಗಳಲ್ಲಿ ಕೆಲಸ ಕೊಡಿಸುವುದಾಗಿ ಜನರಿಂದ ಹಣಪಡೆದು ವಂಚಿಸುತ್ತಿದ್ದನು.
ಬೆಂಗಳೂರು ತುಮಕೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಮಾಯಕರಿಗೆ ಇದುವರೆಗೂ ೮ ಕೋಟಿ ರೂಪಾಯಿವರೆಗೆ ವಂಚಿಸಿದ್ದಾನೆಂದು ತಿಳಿದು ಬಂದಿದೆ. ಇತ್ತೀಚೆಗೆ ಬೆಂಗಳೂರಿನ ಕೆಂಗೇರಿ ಮೂಲದ ನಿವಾಸಿ ಸಾಯಿದ ತಬಸುಮ್ 55ವರ್ಷದ ಮಹಿಳೆಗೆ 1 ಕೋಟಿ 20 ಲಕ್ಷ ಹಣ ಹಾಗೂ 186 ಗ್ರಾಂ ಚಿನ್ನದ ವಂಚನೆ ಮಾಡಿರುವ ದೂರು ದಾಖಲಾಗಿದೆ. ಇದರಿಂದಾಗಿ ಮಿಂಚಿನ ಕಾರ್ಯಾಚರಣೆ ಕೈಗೊಂಡ ಕೆಂಗೇರಿ ಪೊಲೀಸ್ ಠಾಣ ಸಬ್ ಇನ್ಸ್ಪೆಕ್ಟರ್ ಮುರಳಿ ಹಾಗೂ ತಂಡ ಈ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದಾರೆ. ಇವನ ಜೊತೆಗೆ ಆತನ ಪತ್ನಿ ಹಾಗೂ ಸ್ನೇಹಿತನನ್ನು ಪೊಲೀಸರು ಅರೇಸ್ಟ್ ಮಾಡಿದ್ದಾರೆ. ಇನ್ನೂ ಹೆಚ್ಚಿನ ವಂಚನೆಗಳ ಬಗ್ಗೆ ಪೊಲೀಸ್ ವಿಚಾರಣೆಯಿಂದ ಹೊರ ಬರಬೇಕಾಗಿದೆ..
Tags:
Poll (Public Option)

Post a comment
Log in to write reviews