ಸವಾಲನ್ನು ಸ್ವೀಕರಿಸಲಿಲ್ಲ ಹಾಗಾಗಿ ರಾಜೀನಾಮೆ ಕೊಡುವುದಿಲ್ಲ : ಯೂ ಟರ್ನ್ ಹೊಡೆದ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: 2024 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ಸವಾಲು ಹಾಕಿದ್ದ ಪ್ರದೀಪ್ ಈಶ್ವರ್ ಸುಧಾಕರ್ ಅವರು ತಮ್ಮ ಕ್ಷೇತ್ರದಲ್ಲಿ ಒಂದು ಮತದ ಮುನ್ನಡೆ ಸಾಧಿಸಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ, ಇದೀಗ ಸುಧಾಕರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಪ್ರದೀಪ್ ಈಶ್ವರ್ ಅವರ ಕ್ಷೇತ್ರದಲ್ಲೂ ಕೂಡ ಅತಿ ಹೆಚ್ಚು ಮತಗಳನ್ನು ಪಡೆದು ಗೆದ್ದು ಬೀಗಿದ್ದಾರೆ.
ಡಾ. ಕೆ ಸುಧಾಕರ್ ಅವರ ಗೆಲುವಿನ ನಂತರ, ಬಿಜೆಪಿ ನಾಯಕರು ಈಶ್ವರ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಪ್ರಶ್ನಿಸಿದ್ದರು. ಹಾಗಾಗಿ ಈ ವಿಷಯ ಆನ್ ಲೈನ್ ಅಲ್ಲಿ ಕೂಡ ಅತಿ ಹೆಚ್ಚು ಟ್ರೋಲ್ ಆಯಿತು. ಆದರೆ, ಇದೀಗ ತಮ್ಮ ರಾಜೀನಾಮೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ಅವರು, ಸುಧಾಕರ್ ತಮ್ಮ ಸವಾಲನ್ನು ಸ್ವೀಕರಿಸಲಿಲ್ಲ ಹಾಗಾಗಿ ರಾಜೀನಾಮೆ ನೀಡುವ ಮಾತೇ ಬರುವುದಿಲ್ಲ. ನೀವು ಹೇಳುವ ಕಾರಣದಿಂದ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಪ್ರದೀಪ್ ಈಶ್ವರ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
Poll (Public Option)

Post a comment
Log in to write reviews