
ಮೈಸೂರು : ರಾಜಕೀಯ ಜಂಜಾಟದಿಂದ ದೂರ ಉಳಿದು ಕಳೆದ ಮೂರು ದಿನಗಳಿಂದ ಕಬಿನಿ ಹಿನ್ನೀರಿನ ಖಾಸಗಿ ರೆಸಾರ್ಟ್ ನಲ್ಲಿ ವಿಹರಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬ ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪ್ರಜ್ವಲ್ ಬಂಧನವಾಗುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆ ಎಚ್‌ಡಿಕೆ ಕುಟುಂಬ ರೆಸಾರ್ಟ್ ಗೆ ತೆರಳಿತ್ತು. ಶನಿವಾರ ಹೊರಬಿದ್ದ ಮತದಾನೋತ್ತರ ಸಮೀಕ್ಷೆಯಲ್ಲಿ ಮೈತ್ರಿಗೆ ಜಯ, ರಾಜ್ಯದಲ್ಲಿಯೂ ಮೈತ್ರಿಗೆ ಮೇಲುಗೈ ಯಾಗಿ ಜೆಡಿಎಸ್ ಎರಡರಿಂದ ಮೂರು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಅಲ್ಲದೆ ಮಂಡ್ಯದಲ್ಲಿ ಗೆಲ್ಲುವುದಾಗಿ ಸಮೀಕ್ಷೆಗಳ ವರದಿ ಹಿನ್ನಲೆ ಕಂಡುಬಂದಿದ್ದು ಖುಷಿಯಲ್ಲಿ ಎಚ್‌ಡಿಕೆ ಆಪ್ತರು ತೇಲಾಡುತ್ತಿದ್ದಾರೆ. ಪತ್ನಿ, ಪುತ್ರ, ಸೊಸೆ, ಮೊಮ್ಮಗನೊಂದಿಗೆ ನಿರಾಳರಾಗಿದ್ದ ಕುಮಾರಸ್ವಾಮಿ ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗಲ್ಲಿದಾರೆ.
Poll (Public Option)

Post a comment
Log in to write reviews