ಟಾಪ್ 10 ನ್ಯೂಸ್
ನನ್ನ ರಾಜಕೀಯ ಭವಿಷ್ಯವೇ ಹಾಳಾಯಿತು ಎಂದು ಕಣ್ಣೀರು ಹಾಕಿದ ಎಚ್‌ಡಿ ರೇವಣ್ಣ

ವಿಚಾರಣೆ ನಂತರ ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆವೇಳೆ ನಾನು ತಪ್ಪು ಮಾಡಿಲ್ಲ ಸುಳ್ಳು ಕೇಸ್ ನಿಂದಾಗಿ ನನ್ನ ರಾಜಕೀಯ ಜೀವನ ಹಾಳಾಗಿದೆ ಎಂದು ರೇವಣ್ಣ ಕಣ್ಣೀರಿಟ್ಟಿದ್ದಾರೆ.
ಶನಿವಾರ ರಾತ್ರಿಯಿಡೀ ರೇವಣ್ಣ ಅವರ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಭಾನುವಾರವೂ ವಿಚಾರಣೆ ಮುಂದುವರಿಸಿದರು. ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆ ಸುರಿಸಿದ್ದು ರೇವಣ್ಣ ಮಾತ್ರ ಎಲ್ಲದಕ್ಕೂ ಒಂದು ಸಾಲಿನ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.
ಮಹಿಳೆಯ ಅಪಹರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ನಾನು ಯಾರನ್ನೂ ಅಪಹರಿಸಿಲ್ಲ ನಮ್ಮ ಮನೆಯಲ್ಲಿ ನೂರಾರು ಮಹಿಳೆಯರು ಕೆಲಸ ಮಾಡುತ್ತಾರೆ. ಅಪಹರಣಗೊಂಡಿದ್ದಾರೆ ಎನ್ನಲಾದ ಮಹಿಳೆಯೇ ನನಗೆ ಪರಿಚಯವಿಲ್ಲ. ಆ ಮಹಿಳೆ ಆರೋಪಿಸಿರುವಂತೆ ರೇವಣ್ಣ ಎಂಬ ಹೆಸರಿನವರು ನೂರಾರು ಮಂದಿ ಇದ್ದಾರೆ. ರೇವಣ್ಣ ಎಂದು ಹೆಸರು ಇಟ್ಟುಕೊಂಡಿದ್ದೇನೆ ಎಂಬ ಮಾತ್ರಕ್ಕೆ ನನ್ನನ್ನು ಬಂಧಿಸಿರುವುದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
Poll (Public Option)

Post a comment
Log in to write reviews