
ಬಾಕಿ ಉಳಿಸಿಕೊಂಡಿದೆ ಎನ್ನಲಾದ 41 ಕೋಟಿ ಆಸ್ತಿ ತೆರಿಗೆ ಹಣದಲ್ಲಿ 20 ಕೋಟಿ ಹಣವನ್ನು ಜುಲೈ 31 ರ ಒಳಗೆ ಪಾವತಿಸುವುದಾಗಿ ಮಂತ್ರಿಮಾಲ್ ಹೈಕೋರ್ಟ್ ಗೆ ಮುಚ್ಚಳಿಕೆ ನೀಡಿದೆ. ಇದರಿದಾಗಿ ಮೇ 17 ರಂದು ಬೆಳಿಗ್ಗೆ 10 ಗಂಟೆಯ ಒಳಗಾಗಿ ಮಂತ್ರಿಮಾಲ್ ಬೀಗ ತೆಗೆಯಬೇಕೆಂದು ಬಿಬಿಎಂಪಿ ನಿರ್ದೇಶಿಸಿದೆ.
ಏನಿದು ಪ್ರಕರಣ?
41 ಕೋಟಿ ಮೌಲ್ಯದ ಆಸ್ತಿ ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಮಂತ್ರಿಮಾಲ್ ಗೆ ಇದೇ ಮೇ 10ರಂದು ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಸಿಟಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, 'ಬಾಕಿಯಿರುವ ಪೈಕಿ ಶೇ 50ರಷ್ಟು ತೆರಿಗೆ ಹಣವನ್ನು 10 ದಿನಗಳಲ್ಲಿ ಬಿಬಿಎಂಪಿಗೆ ಪಾವತಿಸಬೇಕು. ಹಣ ಪಾವತಿಸಿದ ನಂತರ ಬಿಬಿಎಂಪಿ ಬೀಗ ತೆರೆದು ಮಾಲ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಲು ಬಿಬಿಎಂಪಿ ಅನುಮತಿ ನೀಡಬೇಕು' ಎಂದು ಬುಧವಾರ (ಮೇ 15ರಂದು) ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
Tags:
Poll (Public Option)

Post a comment
Log in to write reviews