
ಹಾಸನದ ಹಾಸನಾಂಬ ದೇಗುಲದಲ್ಲಿ ದೇವಿಯ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಅವಕಾಶವಿದ್ದು, ಭಕ್ತರ ಸಾಗರವೇ ದೇಗುಲಕ್ಕೆ ಬರುತ್ತಿದ್ದಾರೆ. ಇಂದು ಸಹ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ನಿಯಂತ್ರಣ ಮಾಡಲಾಗದೆ ಸಿಬ್ಬಂದಿಗಳು ಸಾಕಷ್ಟು ಪರದಾಡಿದ್ದಾರೆ. ಹೀಗಾಗಿ 1000 ರೂ. ಮೊತ್ತ ನೇರ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ರದ್ದುಗೊಳಿಸಲಾಗಿದೆ. ಜತೆಗೆ, ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಹಾಗೂ ಬೆಂಗಳೂರು ಸೇರಿ ವಿವಿಧೆಡೆಯಿಂದ ಹಾಸನಾಂಬೆ ದರ್ಶನಕ್ಕೆಂದು ಹೊರಡಲು ಅನುವಾಗಿದ್ದ 500 ವಿಶೇಷ ಬಸ್ಗಳಳ ಸಂಚಾರ ರದ್ದುಗೊಳಿಸಲಾಗಿದೆ. ಜನರ ನಿಯಂತ್ರಣ ಸಾಧ್ಯವಾಗದೆ ಟಿಕೆಟ್ ವಿತರಣೆಯನ್ನೇ ರದ್ದು ಮಾಡಲಾಗಿದೆ. ಹೀಗಾಗಿ ವಿಶೇಷ ದರ್ಶನ ಸ್ಥಳದ ಮೂಲಕ ಭಕ್ತರು ಒಳ ಪ್ರವೇಶಿಸದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
Poll (Public Option)

Post a comment
Log in to write reviews