
ನವದೆಹಲಿ: ದೆಹಲಿಗೆ ಆಗಮಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋನಿಯಾ ಗಾಂಧಿ ಕುಟುಂಬ ಭೇಟಿ ಮಾಡಿದರು.
ನರೇಂದ್ರ ಮೋದಿ ಅವರು 3 ನೇ ಬಾರಿ ಪ್ರಧಾನಿ ಹುದ್ದೆ ಸ್ವೀಕರಿಸುವ ಸಂದರ್ಭಕ್ಕೆ ಸಾಕ್ಷಿಯಾಗಲು ದೆಹಲಿಗೆ ಆಗಮಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋನಿಯಾ ಗಾಂಧಿ ಕುಟುಂಬ ಭೇಟಿ ಮಾಡಿ ಆಪ್ತವಾಗಿ ಮಾತುಕತೆ ನಡೆಸಿದರು.
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಒಟ್ಟಾಗಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಭೇಟಿಯ ಆರಂಭದಲ್ಲಿ ಮೂವರೂ ಹಸೀನಾ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದರು. ಶೇಖ್ ಹಸೀನಾ ಮತ್ತು ಗಾಂಧಿ ಕುಟುಂಬದ ನಂಟು ಬಹಳ ಹಳೆಯದು. ಇಂದಿರಾಗಾಂಧಿ ಮತ್ತು ಹಸೀನಾ ತಂದೆ ಶೇಖ್ ಮುಜಿಬುರ್ ರೆಹಮಾನ್‌ಗೆ ಆತ್ಮೀಯರಾಗಿದ್ದರು. ಬಾಂಗ್ಲಾದೇಶ ಸ್ಥಾಪನೆಗೆ ರೆಹಮಾನ್‌ಗೆ ಆಗಿನ ಇಂದಿರಾ ಸರ್ಕಾರ ದೊಡ್ಡ ನೆರವು ನೀಡಿತ್ತು. ಹೀಗಾಗಿ 2 ಕುಟುಂಬಗಳ ಬಾಂಧವ್ಯ ಇಂದಿಗೂ ಗಟ್ಟಿಯಾಗಿದೆ.
Poll (Public Option)

Post a comment
Log in to write reviews