2024-12-24 07:46:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಕ್ರಮ ಚಟುವಟಿಕೆಗಳ ತಾಣವಾಯ್ತಾ ಹುನಗುಂದ ಶಿಕ್ಷಕರ ತರಬೇತಿ ಕೇಂದ್ರ..?

ಪಿ ಎಮ್ ನಾಡಗೌಡರ ಕನಸಿನ ಕೂಸಾದ ಹುನಗುಂದ ಶಿಕ್ಷಕರ ತರಬೇತಿ ಕೇಂದ್ರದ ವ್ಯವಸ್ಥೆ ಬಹಳ ಹದಗೆಟ್ಟು ಹೋಗಿ ಈಗ ಟಪೋರಿಗಳ ಆಶ್ರಯತಾಣವಾಗಿದೆ, ಪ್ರಸ್ತುತ ಇಲ್ಲಿ ಟಪೋರಿಗಳು ದಂಧೆ ಮಾಡುವುದು ಎಣ್ಣೆ ಹೊಡಿಯುವುದನ್ನ ಮಾಡುತ್ತಿದ್ದಾರೆ. 1964 ರಲ್ಲಿ ಪಿ ಎಂ ನಾಡಗೌಡರು ಈ ಕಾಲೇಜನ್ನು ಹೈದರಾಬಾದ್‌ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕದ ಮಧ್ಯಭಾಗವಾಗಿರುವ ಹುನಗುಂದ ನಗರದಲ್ಲಿ ಸ್ಥಾಪಿಸಿದರು. ಈ ಕೇಂದ್ರದಲ್ಲಿ ಕಲಿತವರು ಇಂದು ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಚಿಂತಕರು, ಚಲನಚಿತ್ರ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 

ಈ ಕಾಲೇಜಿನಿಂದ ಪ್ರತಿ ವರ್ಷ ಕನಿಷ್ಟ  30 ವಿದ್ಯಾರ್ಥಿಗಳು ಶಿಕ್ಷಕರಾಗಿ ಹೊರಹೊಗುತ್ತಿದ್ದರು. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 2008/2009 ರಲ್ಲಿ ಅಂದಿನ ಸಕಾ೯ರ ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಹಾಜರಾತಿಯ ಕೊರತೆಯನ್ನು ಮುಂದಿಟ್ಟುಕೊಂಡು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಸ್ಥಳಾಂತರಿಸಲಾಗಿದೆ.ಇಂತಹ  ಪವಿತ್ರ ಜಾಗ ಇಂದು ಅಕ್ರಮ ದಂಧೆ ಮತ್ತು ಕುಡುಕರ ಗೂಡಾಗಿ ಪರಿವರ್ತನೆ ಯಾಗಿರುವುದು ಬೇಸರದ ಸಂಗತಿ.

ಈ ಕಟ್ಟಡ ತಾಲೂಕು ಆಡಳಿತ ಕಚೇರಿ ಪಕ್ಕದಲ್ಲಿದ್ದರು  ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದದ ಸಂಗತಿ. ಕೂಡಲೇ ಈ ಕಟ್ಟಡವನ್ನು ಪುನರ್‌ ಜ್ಜೀವನ ಗೊಳಿಸಿ ಇಲ್ಲವೇ ಶಿಕ್ಷಣಕ್ಕಾಗಿಯೇ ಇಲ್ಲಿ ಹೊಸ ಕಟ್ಟಡ ನಿರ್ಮಿಸಿ ಎಂದು ನಮ್ಮ ಸಮಯ ಟಿವಿಯ ಆಗ್ರಹಿಸುತ್ತಿದೆ.

ಮಹಾಂತೇಶ್‌ ಹಳ್ಳೂರು: ತಾಲೂಕು ವರದಿಗಾರರು ಹುನುಗುಂದ ಬಾಗಲಕೋಟೆ ಜಿಲ್ಲೆ
 

Post a comment

No Reviews