
ಚಂದನವನದ ಚಿಟ್ಟೆ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಶುಕ್ರವಾರದಂದೇ ತಮ್ಮ ಮನೆಗೆ ಮುದ್ದಾದ ಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ. ಹೌದು, ಇವರ ಸೀಮಂತ ಕಾರ್ಯಕ್ರಮದ ಆಚರಣೆ ನಮ್ಮ ಸಂಪ್ರದಾಯ ಮೆರಗು ಹೆಚ್ಚಿಸುತ್ತಿದೆ ಎಂಬುದು ಮನೆಮಾತಾಗಿತ್ತು. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಖುಷಿಯಲ್ಲಿ ತೇಲುತ್ತಿದ್ದಾರೆ. ಅದರಲ್ಲೂ ಲಕ್ಷ್ಮೀಯೇ ಮನೆಗೆ ಆಗಮಿಸಿದ್ದಾಳೆಂಬ ಸಂತಸ ಮನೆಮಾಡಿದೆ. ಸದ್ಯ ತಾಯಿ ಹರ್ಷಿಕಾ ಮತ್ತು ಮಗು ಆರೋಗ್ಯವಾಗಿದೆ. ಅತ್ತ ತಂದೆ ಭುವನ್ ಮಗಳು ಆಗಮಿಸಿದ ಖುಷಿಯಲ್ಲಿ ಆನಂದಭಾಷ್ಪ ಸುರಿಸಿದ್ದಾರೆ.
Poll (Public Option)

Post a comment
Log in to write reviews