
ನವದೆಹಲಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ ಎಂಬ ಸಂಭಾವ್ಯ ಪಟ್ಟಿ ಹೊರಬಿದ್ದ ಹಿನ್ನಲೆ ಹೆಚ್.ಡಿ.ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಖಾತೆ ನೀಡಬೇಕು ಎಂದು ಒತ್ತಡ ಹಾಕಿಲ್ಲ. ಯಾವ ಖಾತೆ ನೀಡಬೇಕು ಎಂಬುದು ಮೋದಿಯವರಿಗೆ ಬಿಟ್ಟ ನಿರ್ಧಾರ. ಅವರಿಗೆ ನನಗಿಂತ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಕೃಷಿ ಖಾತೆ ಕೊಟ್ಟರೆ ಬಹಳ ಸಂತೋಷ ಪಡುತ್ತೇನೆ. ಸಕ್ಕರೆ ಖಾತೆಯೂ ಒಳ್ಳೆಯ ಖಾತೆಯಾಗಿದೆ. ಆದರೆ ನಾನು ಇಂತಹದ್ದೇ ಖಾತೆ ಬೇಕು ಎಂದು ಹೇಳಿಲ್ಲ ಜನರ ಮಧ್ಯೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ನನ್ನ ಒಲವು ಎಂದಿದ್ದಾರೆ.
Poll (Public Option)

Post a comment
Log in to write reviews