
ಬಿಗ್ ಬಾಸ್ ಸೀಸನ್ 11 ರ 4ನೇ ವಾರಕ್ಕೆ ಕಾಲಿಟ್ಟಿದ್ದು, ಬಿಗ್ ಬಾಸ್ ಮನೆಯಲ್ಲಿ ಹಲವು ಕಿತ್ತಾಟ ಮನಸ್ತಾಪಗಳು ಸೃಷ್ಟಿಯಾಗಿದ್ದು, ಈ ಕಾರ್ಯಕ್ರಮವು ಭಾರೀ ಕುತೂಹಲದಿಂದ ಸಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ ಭಾರೀ ಕುತೂಹಲದಿಂದ ಸಾಗುತ್ತಿದೆ. ಈಗಾಗಲೇ ಮನೆಯಿಂದ ಮೂರು ಸ್ಪರ್ಧಿಗಳು ಹೊರಹೋಗಿದ್ದು, ಅದರಲ್ಲಿ ಇಬ್ಬರನ್ನು ಹಲ್ಲೆ ವಿಚಾರಕ್ಕೆ ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ದೊಡ್ಮನೆಗೆ ಹೊಸ ಅತಿಥಿಯಾಗಿ ಗಾಯಕ ಹನುಮಂತ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಟ್ಟ ಮೊದಲ ದಿನವೇ ಮನೆಯ ನಾಯಕ ಸ್ಥಾನವನ್ನು ಬಿಗ್ ಬಾಸ್ ಅವರ ಕೈಗಿಟ್ಟಿದ್ದಾರೆ. ಹೀಗಿರುವಾಗ ಮನೆಯ ಸ್ಪರ್ಧಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ. ಅದಕ್ಕೆ ಟಾಸ್ಕ್ ಕಾರಣವಾಗಿದೆ.
ಹೊಸ ಕ್ಯಾಪ್ಟನ್ ಆಗಿ ಹನುಮಂತ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಅವರಿಗೆ ಟಾಸ್ಕ್ ಕೊಟ್ಟಿದ್ದಾರೆ. ಅದು ಏನೆಂದರೆ ಮನೆಯ ಸ್ಪರ್ಧಿಗಳನ್ನು ನಂಬರ್ ಆಧಾರದ ಮೇಲೆ ಸ್ಥಾನಗಳನ್ನು ನೀಡುವ ಟಾಸ್ಕ್ ನೀಡಿದ್ದಾರೆ. ಆದರೆ ಹನುಮಂತು ನೀಡಿರುವ ಸ್ಥಾನದ ಕುರಿತು ಸ್ಪರ್ಧಿಗಳ ನಡುವೆ ಅಸಮಾಧಾನ ಉಂಟಾಗಿದೆ.
ತ್ರಿವಿಕ್ರಮ್, ಭವ್ಯ ಗೌಡ, ಚೈತ್ರಾ ಕುಂದಾಪುರ, ಕೀರ್ತಿ ಧರ್ಮರಾಜ್, ಹೀಗೆ ಕೆಲವರು ಹನುಮಂತು ಮೇಲೆ ಸಿಟ್ಟಿಗೆದ್ದಿದ್ದಾರೆ. ನನಗೆ ಈ ಸ್ಥಾನವನ್ನು ಯಾಕೆ ಕೊಟ್ಟೆ ಎಂದು ಕೋಪಿಸಿಕೊಂಡಿದ್ದಾರೆ. ಜೊತೆಗೆ ಹನುಮಂತುನನ್ನು ಪ್ರಶ್ನಿಸಿದ್ದಾರೆ.
ಇವರೆಲ್ಲರ ಮಾತು ಕೇಳಿ ಹನುಮಂತು ಸುಸ್ತಾಗಿದ್ದಾರೆ. ಕೊನೆಗೆ ಈ ರೀತಿ ಜಗಳ ಆಡುತ್ತೀರಾ ಅಂದರೆ ಬರುತ್ತಿರಲಿಲ್ಲ. ನಾನು ಈ ಆಟದಲ್ಲಿ ಇಲ್ಲ. ಕ್ಯಾಪ್ಟನ್ ಕ್ಯಾನ್ಸಲ್ ಎಂದು ಹನುಮಂತು ಬಿಗ್ ಬಾಸ್ ಬಳಿ ಹೇಳಿದ್ದಾರೆ.
Poll (Public Option)

Post a comment
Log in to write reviews