
ಬೆಂಗಳೂರು : ಬಿಗ್ ಬಾಸ್ ನಲ್ಲಿ ಮತ್ತೊಂದು ಅವಗಡ ಸಂಭವಿಸಿದೆ, ಈಗಷ್ಟೇ ಬಿಗ್ ಬಾಸ್ ಮನೆಗೆ ಕಾಲಿಟ್ಟಂತಹ ಹನುಮಂತನಿಗೆ ಅಪಾಯವೊಂದು ಸಂಭವಿಸಿದೆ ಆದ್ದರಿಂದ ಇವರನ್ನು ಚಿಕಿತ್ಸೆಗೋಸ್ಕರ ಬಿಗ್ ಬಾಸ್ ಮನೆಯಿಂದ ಹೊರ ಕಳಿಸಲಾಗಿದೆ.
ಈ ಬಾರಿಯ ಬಿಗ್ ಬಾಸ್ ಆರಂಭವಾದ ದಿನದಿಂದ ಒಂದಲ್ಲ ಒಂದು ಅವಘಡ ಸಂಭವಿಸುತ್ತಲೇ ಇದೆ. ಸ್ಪರ್ಧಿಗಳು ಮಿತಿ ಮೀರಿದ ವರ್ತನೆ ತೋರುತ್ತಲೆ ಬಂದಿದ್ದಾರೆ.
ಈ ಬಾರಿ ಬಿಗ್ ಬಾಸ್ ಕನ್ನಡ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದ ಲಾಯರ್ ಜಗದೀಶ್ ಮನೆಯಿಂದ ಹೊರ ಬಂದರು. ಇದರಿಂದ ಬಿಗ್ ಬಾಸ್ ಅಭಿಮಾನಿಗಳಿಗೆ ಅಸಮಾಧಾನವಾಗಿದ್ದು, ಶೋ ನೋಡುವವರ ಸಂಖ್ಯೆ ಕುಸಿಯುವ ಸಾಧ್ಯತೆ ಇತ್ತು. ಆದರೆ ಚಾಣಾಕ್ಷ್ಯತನ ಮೆರೆದ ಬಿಗ್ ಬಾಸ್ ತಂಡ ಹಾಡುಗಾರ ಹಳ್ಳಿ ಹುಡುಗ ಹನುಮಂತನನ್ನು ಸ್ಪರ್ಧಿಯಾಗಿ ಕರೆತಂದಿತು. ಹನುಮಂತನ ಮುಗ್ಧ ಮಾತು, ನಡವಳಿಕೆ ನೋಡುಗರಿಗೆ ಇಷ್ಟವಾಗುತ್ತಿತ್ತು. ಕಳೆದ ಮೂರು ದಿನಗಳಿಂದ ಪ್ರೇಕ್ಷಕರು ಹನುಮಂತನಿಗಾಗಿ ಶೋ ನೋಡುತ್ತಿದ್ದರು ಜೊತೆಗೆ ಎಂಜಾಯ್ ಮಾಡುತ್ತಿದ್ದರು. ಆದರೆ ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಜಗಳ ಕಿತ್ತಾಟ ಸಾಮಾನ್ಯವಾಗಿದೆ. ಅಂತೆ ಇಂದು ಪ್ರಸಾರಗೊಳ್ಳುತ್ತಿರುವ ಸಂಚಿಕೆಯಲ್ಲಿ ಕೂಡ ಟಾಸ್ಕ್ ವೇಳೆ ಕಿತ್ತಾಟಗಳು ಜೋರಾಗಿ ನಡೆದಿದೆ. ಆದರೆ ಈ ಟಾಸ್ಕ್ ಆಡುವಾಗ ಅವಘಡ ಸಂಭವಿಸಿದ್ದು ಎಳೆದಾಟ ಕಿತ್ತಾಟದಲ್ಲಿ ಹನುಮಂತ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತತನನ್ನು ಇತರ ಸ್ಪರ್ಧಿಗಳು ಉಪಚರಿಸಿ, ಚಿಕಿತ್ಸೆಗೆ ಕಳುಹಿಸಿರುವ ಪ್ರೋಮೋ ವೈರಲ್ ಆಗುತ್ತಿದೆ. ಹನುಮಂತನ ಆರೋಗ್ಯ ಸ್ಥಿತಿಯ ಸದ್ಯದ ಪರಿಸ್ಥಿತಿ ಬಗ್ಗೆ ಬಿಗ್ ಬಾಸ್ ತಂಡದಿಂದ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
Poll (Public Option)

Post a comment
Log in to write reviews