
ವಿಜಯನಗರ: ನಿನ್ನೆ ಸುರಿದ ಭಾರೀ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳು ಕೆಳಗೆ ಉರುಳಿ ಬಿದ್ದಿವೆ. ವಿಜಯನಗರ ಸಾಮ್ರಾಜ್ಯ ಕಾಲದ ಕಲ್ಲು ಮಂಟಪ ಇದಾಗಿದ್ದು, ವಿಪರೀತ ಮಳೆಗೆ ಮಂಟಪ ಕುಸಿದು ಬಿದ್ದಿದೆ. ಇದು ಪಂಪ ವಿರೂಪಾಕ್ಷ ದೇವಾಲಯದ ರಥಬಿದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತದ್ದು. ಹೀಗಾಗಿ ಇವುಗಳನ್ನು ನೋಡಲು ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ, ಪುರಾತತ್ವ ಇಲಾಖೆಯು ಇವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಸ್ಮಾರಕಗಳ ರಕ್ಷಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಬರುತ್ತಿದ್ದರು ಕೇಂದ್ರ ಪುರಾತತ್ವ ಇಲಾಖೆ ಇವುಗಳ ಸ್ಥಿತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.
Poll (Public Option)

Post a comment
Log in to write reviews