ಬಿಜೆಪಿ-ಕಾಂಗ್ರೆಸ್ ನಡುವೆ ಕೂದಲ ಸಮರ: ಜೂ. 4 ನಂತರ ವಿಜಯೇಂದ್ರಗೆ ಬೇರೆ ಕೆಲಸ ಕೊಡುತ್ತೇನೆ: ಸಚಿವ ಮಧು ಬಂಗಾರಪ್ಪ

ಕಳೆದ ಬಾರಿ ಬಿಜೆಪಿ ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ ವಿಧಾನಸಭೆಯಲ್ಲಿ 130 ಸೀಟುಗಳಿಂದ 60 ಸೀಟುಗಳಿಗೆ ಬಂದರು. ಈಗ ನನ್ನ ಕೂದಲು ಬಗ್ಗೆ ಮಾತಾಡಿ ಲೋಕಸಭೆಯಲ್ಲಿ 26 ಕ್ಷೇತ್ರಗಳಿಂದ 6 ಕ್ಕೆ ಬರುತ್ತಾರೆ ನೋಡಿ, ಎಂದು ಮೈಸೂರಿನಲ್ಲಿ ಮಧು ಬಂಗಾರಪ್ಪ ಹೇಳಿದ್ದಾರೆ.
ಆಗ ನೀವು ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಮಾತಾಡಿದ್ರಾ, ಅಥವ ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಆಗಾ ಯಾಕೆ ಪ್ರಶ್ನಿಸಲಿಲ್ಲ ನಿವು, ಈಗ ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯಾನಾ ಎಂದು ಬಿಜೆಪಿಯವರ ವಿರುದ್ಧ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
40% ಕಮೀಷನ್ ಪಡೆದಿರುವ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ಈಗ ನಮ್ಮ ಹೇರ್ ಕಟ್ ಬಗ್ಗೆ ಮಾತನಡುತ್ತಿದ್ದಾರೆ. ನನ್ನ ಹೇರ್ ಕಟ್ ಮಾಡಲು ಯಾರು ಬರುತ್ತಾರೋ ಅವರು ನಾನು ಟೈಂ ಕೊಟ್ಟಾಗ ಬರಲಿ. ಅವರ ತಜ್ಞತೆ ನೋಡಿ ಆ ಕೆಲಸ ಕೊಡುತ್ತೇನೆ. ಆದರೆ ಈಗ ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಬಿಜೆಪಿ ಯಾವರಂತೆ ನನಗೆ ಯಾವ ದುರ್ಬುದ್ದಿ ಇಲ್ಲ. ಅವರಂತೆ ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ. ನಾನು ಯಾರ ಮಾತು ಕೇಳಲ್ಲ. ಜೂ. 04 ಆಗಲಿ ನಂತರ ವಿಜಯೇಂದ್ರ ಅವರಿಗೆ ಬೇರೆಯದೆ ಕೆಲಸ ಕೊಡುತ್ತೇನೆಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು.
Poll (Public Option)

Post a comment
Log in to write reviews