
ಉತ್ತರ ಪ್ರದೇಶ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಏಕಾಏಕಿ ಗೂಳಿಯೊಂದು ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಕೃಪಾಲ್ ಸಿಂಗ್ (85 ) ಅವರ ಎದೆ ಮತ್ತು ಹೊಟ್ಟೆಗೆ ಗೂಳಿಯ ಕೊಂಬು ಚುಚ್ಚಿ ಕೊಂಡಿದೆ. ಹೊಟ್ಟೆಗೆ ತಿವಿದ ಕಾರಣ ವೃದ್ಧನ ಹೊಟ್ಟೆಯಿಂದ ಕರುಳು ಹೊರಬಂದಿದೆ, ಸ್ಥಳೀಯರು ಈ ಘಟನೆಯನ್ನು ನೋಡಿ ದಂಗಾಗಿ ಹೋಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೂಳಿಯ ದಾಳಿಗೆ ವೃದ್ಧ ತುಂಬಾ ದೂರಕ್ಕೆ ಬಿದ್ದಿದ್ದು, ಹೊಟ್ಟೆಯಿಂದ ಕರುಳು ಹೊರ ಬಂದಿದೆ. ತಕ್ಷಣ ಸ್ಥಳೀಯರು ವೃದ್ಧನನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ,ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಮೃತ ಪಟ್ಟಿದ್ದಾರೆ.
Poll (Public Option)

Post a comment
Log in to write reviews