2024-09-16 03:42:04

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕ್ರಿಕೆಟ್ ಕಾಶಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಗಸ್ ಅಟ್ಕಿನ್ಸನ್

ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್ ಆಟಗಾರ ಗಸ್ ಅಟ್ಕಿನ್ಸನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಈ ಮೈದಾನದಲ್ಲಿ ಆಡಿದ 4 ಇನಿಂಗ್ಸ್​ಗಳ ಮೂಲಕ ಎಂಬುದು ವಿಶೇಷ. ಇದರೊಂದಿಗೆ 1978 ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಅಟ್ಕಿನ್ಸನ್ ಅಳಿಸಿ ಹಾಕಿದ್ದಾರೆ.

ಕ್ರಿಕೆಟ್​ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಕೇವಲ 4 ಇನಿಂಗ್ಸ್​ಗಳ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು ಇಂಗ್ಲೆಂಡ್ ಆಟಗಾರ ಗಸ್ ಅಟ್ಕಿನ್ಸನ್ (Gus Atkinson). ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಟ್ಕಿನ್ಸನ್ 115 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 118 ರನ್ ಚಚ್ಚಿದ್ದಾರೆ.

ಈ ಸ್ಪೋಟಕ ಸೆಂಚುರಿಯೊಂದಿಗೆ ಲಾರ್ಡ್ಸ್​ ಮೈದಾನದಲ್ಲಿ ಶತಕ ಬಾರಿಸಿದ ಬ್ಯಾಟರ್​ಗಳ ಹಾನರ್ಸ್​ ಪಟ್ಟಿಯಲ್ಲಿ ಗಸ್ ಅಟ್ಕಿನ್ಸನ್ ಹೆಸರು ಕೂಡ ಸೇರ್ಪಡೆಯಾಯಿತು. ವಿಶೇಷ ಎಂದರೆ ಅತ್ತ ಇದೇ ಮೈದಾನದಲ್ಲಿ 5 ಹಾಗೂ 10 ವಿಕೆಟ್​ಗಳ ಸಾಧನೆ ಮಾಡಿದ ಬೌಲರ್​ಗಳ ಹಾನರ್ಸ್ ಪಟ್ಟಿಯಲ್ಲೂ ಅಟ್ಕಿನ್ಸನ್ ಹೆಸರಿಸಿದೆ.

ಇದರೊಂದಿಗೆ ಕ್ರಿಕೆಟ್ ಕಾಶಿಯಲ್ಲಿ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ ಮೂರು ಹಾನರ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗಸ್ ಅಟ್ಕಿನ್ಸನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್​ನ ಮಾಜಿ ಆಟಗಾರ ಇಯಾನ್ ಬಾಥಮ್ ಹೆಸರಿನಲ್ಲಿತ್ತು.

1978 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಯಾನ್ ಬಾಥಮ್ ಶತಕ ಬಾರಿಸಿದ್ದರು. ಅಲ್ಲದೆ ಅದೇ ಪಂದ್ಯದಲ್ಲಿ 5 ವಿಕೆಟ್​ಗಳ ಸಾಧನೆ ಮಾಡಿದ್ದರು. ಆದರೆ ಲಾರ್ಡ್ಸ್​ ಮೈದಾನದಲ್ಲಿ 5 ವಿಕೆಟ್, 10 ವಿಕೆಟ್ (2 ಇನಿಂಗ್ಸ್​ಗಳ ಮೂಲಕ) ಹಾಗೂ ಶತಕ ಸಿಡಿಸಿದ ಹಾನರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಇಯಾನ್ ಬಾಥಮ್ ಒಟ್ಟು 6 ಇನಿಂಗ್ಸ್ ತೆಗೆದುಕೊಂಡಿದ್ದರು.

ಆದರೀಗ ಈ ದಾಖಲೆಯನ್ನು ಗಸ್ ಅಟ್ಕಿನ್ಸನ್ ಮುರಿದಿದ್ದಾರೆ. ಅದು ಸಹ ಕೇವಲ 4 ಇನಿಂಗ್ಸ್​ಗಳ ಮೂಲಕ ಎಂಬುದು ವಿಶೇಷ. ಜುಲೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರ್ಡ್ಸ್​​ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲೂ 5 ವಿಕೆಟ್ ಕಬಳಿಸಿ ಒಟ್ಟು 12 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರ್ಡ್ಸ್ ಟೆಸ್ಟ್​ನಲ್ಲಿ 10 ವಿಕೆಟ್​ಗಳನ್ನು ಪಡೆದ ಸಾಧಕರ ಪಟ್ಟಿಗೂ ಸೇರ್ಪಡೆಯಾಗಿದ್ದರು.

ಇದೀಗ ಶ್ರೀಲಂಕಾ ವಿರುದ್ಧ ಶತಕ ಸಿಡಿಸುವ ಮೂಲಕ ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿನ ಮೂರು ಹಾನರ್ಸ್ ಪಟ್ಟಿಯಲ್ಲೂ ಸ್ಥಾನ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಗಸ್ ಅಟ್ಕಿನ್ಸನ್ ಕೇವಲ 4 ಇನಿಂಗ್ಸ್​ಗಳ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Post a comment

No Reviews