ರಾಜಕಾಲುವೆ ನೀರಲ್ಲಿ ಬೆಳೆದ ಸೊಪ್ಪು, ತರಕಾರಿ: ಸಿಟಿ ಜನರ ದೇಹ ಸೇರುತ್ತಿದೆ ಸ್ಲೋ ಪಾಯಿಸನ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಡಿ.ಚನ್ನಸಂದ್ರ ಸುತ್ತಮುತ್ತ ಹತ್ತಾರು ಎಕರೆಯಲ್ಲಿ ಗಬ್ಬೆದ್ದು ನಾರುತ್ತಿರುವ ರಾಜಕಾಲುವೆ ನೀರಿಗೆ ಅನಧಿಕೃತವಾಗಿ ನೂರಾರು ಮೋಟಾರ್ ಅಳವಡಿಕೆ ಮಾಡಿ ಹತ್ತಾರು ಎಕರೆಗಳಲ್ಲಿ ಸೊಪ್ಪು, ತರಕಾರಿ ಬೆಳೆದು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಸಿಟಿ ಜನರ ದೇಹ ಸೇರುತ್ತಿದೆ ಸ್ಲೋ ಪಾಯಿಸನ್. ಬೆಂಗಳೂರಿನ ಬಹುತೇಕ ಮಾರ್ಕೆಟ್ಗಳಿಗೆ ಇದೇ ಸೊಪ್ಪು ಸಫ್ಲೆ ಮಾಡಲಾಗುತ್ತಿದ್ದು, ಅಕ್ಕಪಕ್ಕದ ಇಂಡಸ್ಟ್ರೀಗಳ ಕೆಮಿಕಲ್ ಮಿಶ್ರಿತ ನೀರು ಕೂಡ ಇದೇ ಕಾಲುವೆಗೆ ಸೇರ್ಪಡೆಯಾಗುತ್ತಿದೆ. ಮಾರಾಟಗಾರರು ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡ್ತಿದ್ದಾರೆ ಎಂದು ಕೆಲ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ಚರಂಡಿ ನೀರಲ್ಲಿ ಸೊಪ್ಪು ತೊಳೆದಿದ್ದ ವ್ಯಾಪಾರಿಯ ವಿಡಿಯೋ ರಾಜ್ಯದಲ್ಲೆಡೆ ಸಂಚಲನ ಮೂಡಿಸಿತ್ತು. ಇದೀಗ ಸಿಲಿಕಾನ್ ಸಿಟಿಯಲ್ಲೇ ಕೊಳಚೆ ನೀರಲ್ಲಿ ಸೊಪ್ಪಿನ ಕೃಷಿ ಮಾಡಲಾಗುತ್ತಿದೆ. ಇಡೀ ರಾಜಧಾನಿಯ ತ್ಯಾಜ್ಯ, ಹೊತ್ತು ಸಾಗೋ ರಾಜಕಾಲುವೆ ನೀರಲ್ಲಿ ಸೊಪ್ಪು ಬೆಳೆದು ಜನರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ವ್ಯಾಪಾರಿಗಳ ನಡೆಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಜನರ ಆರೋಗ್ಯ ಹಾಳುಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
Poll (Public Option)

Post a comment
Log in to write reviews