
ನವದೆಹಲಿ: ವಿಶ್ವ ಸಿನಿಮಾ ಪ್ರೇಮಿಗಳ ದಿನದ ಅಂಗವಾಗಿ ಇಂದು ಸಿನಿಮಾ ಟಿಕೆಟ್‌ಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.
ಮೇ 31 (ಇಂದು) ವಿಶ್ವ ಸಿನಿಮಾ ಪ್ರೇಮಿಗಳ ದಿನ. ಇದರ ಪ್ರಯುಕ್ತವಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಐಎನ್‌ಆರ್) ಅಡಿಯಲ್ಲಿ ಬರುವ ಚಿತ್ರಮಂದಿರಗಳಲ್ಲಿ ಎಲ್ಲ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲು ನಿರ್ಧರಿಸಿದೆ.
ವಿಶ್ವ ಸಿನಿಮಾ ದಿನದ ಆಚರಣೆಯ ಸಲುವಾಗಿ ಮತ್ತು ವಿಶೇಷವಾಗಿ ಚಲನಚಿತ್ರ ಉತ್ಸಾಹಿಗಳಿಗೆ ಮನೋರಂಜನೆ ಮಹತ್ವ ಎತ್ತಿ ತೋರಿಸಲು ಈ ರಿಯಾಯಿತಿ ನೀಡುತ್ತಿದೆ. ಚಲನಚಿತ್ರ ಮಂದಿರಗಳಲ್ಲಿ ಪ್ರತಿ ಟಿಕೆಟ್ ಅನ್ನು ಐಎನ್‌ಆರ್ 99 ರೂ. ಗೆ ಮಾರಾಟ ಮಾಡಲು ನಿರ್ಧರಿಸಿದೆ. ದೇಶಾದ್ಯಂತ ಎಲ್ಲಾ ನಾಲ್ಕು ಸಾವಿರ ಹೆಚ್ಚಿರುವ ಚಿತ್ರಮಂದಿರಗಳಲ್ಲಿ ಈ ರಿಯಾಯಿತಿ ಅನ್ವಯಿಸುತ್ತದೆ.
Poll (Public Option)

Post a comment
Log in to write reviews