
ಬೆಂಗಳೂರು: ಪಂಚೆಯುಟ್ಟ ರೈತನಿಗೆ ಒಳಗಡೆ ಪ್ರವೇಶ ನೀಡದಿರುವುದು ಜಿಟಿ ಮಾಲ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು, 7 ದಿನ ಮಾಲ್ ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ನೋಟಿಸಿಗೆ ಜಿಟಿ ಮಾಲ್ ಸಿಇಒ ಉತ್ತರ ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ನೋಟಿಸಿಗೆ ಜಿಟಿ ಮಾಲ್ ಸಿಇಒ ಪ್ರಶಾಂತ್ ಆನಂದ್ ಉತ್ತರಿಸಿದ್ದು, ಘಟನೆಯಿಂದ ನಮಗೂ ತೀವ್ರ ಬೇಸರವಾಗಿದೆ. ಪಂಚೆ ನಮ್ಮ ಕರ್ನಾಟಕ, ರಾಜ್ಯದ ಸಾಂಸ್ಕೃತಿಕ ಉಡುಗೆಯಾಗಿದೆ. ಜಿಟಿ ಮಾಲ್‌ನಲ್ಲು ಸಾಕಷ್ಟು ಮಳಿಗೆಗಳಲ್ಲಿ ಪಂಚೆ ಮಾರಲಾಗುತ್ತಿದೆ. ರೈತನನ್ನು ಒಳಗೆ ಬಿಡದ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಪಂಚೆ ಧರಿಸುವವರಿಗೆ ಮಾಲ್ ಪ್ರವೇಶವಿಲ್ಲವೆಂಬುದು ಶುದ್ಧ ಸುಳ್ಳು. ಈ ಹಿಂದೆಯೂ ಹಲವು ಗ್ರಾಹಕರು ಪಂಚೆ ಧರಿಸಿ ಮಾಲ್ಗೆ ಬಂದಿದ್ದಾರೆ. ಇಂತಹ ಘಟನೆ ಮತ್ತೆ ಮರುಕಳಿಸುವುದಿಲ್ಲವೆಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
Poll (Public Option)

Post a comment
Log in to write reviews