ಗೋಮುಖ ವ್ಯಾಘ್ರ : ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕೋಪಗೊಂಡ ಮೋಕ್ಷಿತಾ ಪೈ

ಈ ಬಾರಿ ಬಿಗ್ ಬಾಸ್ ಬಿಗ್ ಬಾಸ್ ಪ್ರೀಯರಿಗೆ ದಿನದಿಂದ ದಿನಕ್ಕೆ ನಿರಾಸೆ ಹುಟ್ಟಿಸುತ್ತಿದೆ. ಶೋ ಆರಂಭದಲ್ಲೇ ಸ್ಪರ್ಧಿಗಳು ಮಿತಿ ಮೀರಿದ ವರ್ತನೆ ತೋರುತ್ತಿದ್ದು, ಪ್ರತಿ ದಿನವೂ ನೋಡುಗರು ಜಗಳ ನೋಡುವಂತಾಗಿದೆ. ಮಾತು ಮಾತಿಗೂ ಜಗಳ ಆಟ ಆಟಕ್ಕೂ ಜಗಳ, ಕೂತರು ಜಗಳ, ನಿಂತರೂ ಜಗಳ ಹೀಗೆ ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದಕ್ಕೂ ಜಗಳವೇ ಎನ್ನುವಂತಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಜಗಳದಿಂದಲೇ ಒಂದಿಷ್ಟು ಜನ ಹೈಲೈಟ್ ಆಗಿದ್ದಾರೆ ಈವರೆಗೂ ಸುಮ್ಮನಿದ್ದ, ಬೇರೆಯವರು ನೊಂದರೆ ಕಣ್ಣೀರು ಹಾಕುತ್ತಿದ್ದ ಪಾರು ಖ್ಯಾತಿಯ ಮೋಕ್ಷಿತಾ ಪೈ ಕೋಪ ಸ್ಫೋಟಗೊಂಡಿದೆ. ಗೌತಮಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಸೈಲೆಂಟ್ ಆಗಿದ್ದ ಮೋಕ್ಷಿತಾ ಪೈ, ಇನ್ಮುಂದೆ ಅಸಲಿ ಆಟ ಶುರು ಎಂದು ನಟ ತ್ರಿವಿಕ್ರಮ್ ವಿರುದ್ಧ ಸವಾಲು ಹಾಕಿದ್ದಾರೆ.
ಉಗ್ರಂ ಮಂಜು ಜೊತೆಗೆ ತ್ರಿವಿಕ್ರಮ್ ಮಾತನಾಡುತ್ತಾ, ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಮೋಕ್ಷಿತಾ ಕಿವಿಗೆ ಬಿದ್ದಿದೆ. ಇದರಿಂದ ಕೋಪಗೊಂಡ ಮೋಕ್ಷಿತಾ, ನಾನು ಹತ್ತೇ ವಾರ ಇರುವುದು ಅಂತಾ ನಿರ್ಧಾರ ಮಾಡೋಕೆ ಇವರು ಯಾರು ಎಂದು ಕಿರುಚಾಡಿದ್ದಾರೆ.
ಈ ವೇಳೆ ಆಯ್ತಮ್ಮಾ, ನೀನು ಫಿನಾಲೆಗೆ ಹೋಗಮ್ಮ ಎಂದು ತ್ರಿವಿಕ್ರಮ್ ತಾತ್ಸಾರವಾಗಿ ಉತ್ತರ ಕೊಟ್ಟಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಮೋಕ್ಷಿತಾ, ನಾವೆಲ್ಲಾ ಇಲ್ಲಿ ಏನೂ ಅಲ್ಲ. ಒಂದೇ ಧಾರಾವಾಹಿನ ಐದು ವರ್ಷ ಮಾಡಿ, ಸುಮ್ಮನೆ ಇಲ್ಲಿಗೆ ಬಂದಿದ್ದೇವೆ. ನೀವು ಗೋಮುಖ ವ್ಯಾಘ್ರ ತರ ಆಟ ಆಡುತ್ತಿದ್ದೀರಾ ಎಂದು ನೇರವಾಗಿ ತ್ರಿವಿಕ್ರಮ್‌ಗೆ ಮೋಕ್ಷಿತಾ ಪೈ ಹೇಳಿದ್ದು, ಈ ವೇಳೆ ನೀವೇನು ತಿಳಿದುಕೊಂಡಿದ್ದೀರಾ ಅದನ್ನು ಸುಳ್ಳು ಅಂತಾ ಪ್ರೂವ್ ಮಾಡುತ್ತೇವೆ ಎಂದು ತ್ರಿವಿಕ್ರಮ್ ಉತ್ತರಿಸಿದ್ದಾರೆ.
Poll (Public Option)

Post a comment
Log in to write reviews