
ಬೆಳಗಾವಿ: ಅನುದಾನಿತ ಶಾಲೆಗಳು ಡಿಸಿ ಆದೇಶಕ್ಕೂ ಬೆಲೆ ನೀಡದೇ ಹಣ ವಸೂಲಿ ಮಾಡುತ್ತಿವೆ ಅನ್ನೋ ಆರೋಪ ಕೇಳಿ ಬಂದಿವೆ. ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಶಿಕ್ಷಣಾಧಿಕಾರಿಗಳು ಅನುದಾನಿತ ಶಾಲಾ ಆಡಳಿತ ಮಂಡಳಿಯ ಕೈ ಗೊಂಬೆಯಾಗಿದ್ದಾರೆ.
ಸರ್ಕಾರಿ ಫೀಸ್ ಬಿಟ್ಟು, ಆಡಳಿತ ಮಂಡಳಿ ನಿಗದಿ ಮಾಡಿದ ಫೀಸ್‌ಗೆ ಬಿಇಒ ತಲೆ ಬಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಹೋದ ಮಾಧ್ಯಮದವರಿಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ಅಲ್ಲದೇ ಬಿಇಒ ಅಧಿಕಾರಿಗಳನ್ನ ಮಾಹಿತಿ ಕೇಳಲು ಹೋದರೆ ಕಚೇರಿಗೆ ಚಕ್ಕರ್ ಹೊಡಿಯುತ್ತಿದ್ದಾರೆ. ಎಸ್‌ಸಿ, ಎಸ್‌ಟಿಗಳಿಂದ 1700 ಹಾಗೂ ಇತರೆ ಜಾತಿಗಳಿಂದ ತಲಾ 2000 ರೂಪಾಯಿ ಪಡೆಯಲಾಗುತ್ತಿದೆ. ಅಲ್ಲದೇ ಒಂದೊಂದು ಶಾಲೆಯಲ್ಲಿ ಒಂದೊಂದು ಬೆಲೆ ನಿಗದಿ ಮಾಡಿ ವಸೂಲಿ ಮಾಡುತ್ತಿವೆ.
Poll (Public Option)

Post a comment
Log in to write reviews