
ಕಣ್ಣೂರು: ಗುದನಾಳದಲ್ಲಿ ಚಿನ್ನ ಇಟ್ಟುಕೊಂಡು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಗಗನ ಸಖಿಯೋರ್ವಳನ್ನು ಬಂಧಿಸಲಾಗಿದೆ.
ಆರೋಪಿ ಗಗನಸಖಿಯನ್ನು ಸುರಭಿ ಖಾತೂನ್ ಏರ್ ಇಂಡಿಯಾ ವಿಮಾನ ಕ್ಯಾಬಿನ್ ಸಿಬ್ಬಂದಿಯಾಗಿದ್ದಳು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕೆಲಸ ಮಾಡುತಿದ್ದ ಆರೋಪಿ ಮೇ 28ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿಳಿದ್ದಳು. ಈ ವೇಳೆ ಆಕೆಯ ಗುದನಾಳದಲ್ಲಿ ಸುಮಾರು 1 ಕೆಜಿ ಚಿನ್ನ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆರೋಪಿಯಿಂದ ಡಿಆರ್‌ಐ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಸುರಭಿ ಖಾತೂನ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 14 ದಿನಗಳ ಕಸ್ಟಡಿಗೆ ನೀಡಲಾಗಿದೆ.
ಆರೋಪಿ ಸುರಭಿ ಈ ಹಿಂದೆ ಕೂಡ ಹಲವು ಬಾರಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪವಿದೆ. ಈ ಬಾರಿ ಮಸ್ಕತ್ನಿಂದ ಆಕೆ ಭಾರತಕ್ಕೆ ವಿಮಾನದಲ್ಲಿ ಬರುತ್ತಿದ್ದಾಗ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಗೆ ಕಳ್ಳಸಾಗಣೆಯ ಮಾಹಿತಿ ನೀಡಿದ್ದು, ಸುರಭಿ ಯನ್ನು ಬಂಧಿಸಲಾಗಿದೆ
Poll (Public Option)

Post a comment
Log in to write reviews