
ಬೆಂಗಳೂರು : ಭಾರೀ ಪ್ರಮಾಣದ ಚಿನ್ನಾಭರಣ ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿರುವ ಪದಮ್ ಜ್ಯುವಲರಿ ಶಾಪ್ ಗೆ ನುಗ್ಗಿ ಗನ್ ಪಾಯಿಂಟ್ ತೋರಸಿ ಸಿನಿಮಾ ಸ್ಟೈಲ್ ದರೋಡೆ ಮಾಡಿದ್ದಾರೆ. ರಾತ್ರಿ 9.15ರ ಸುಮಾರಿಗೆ ಆಭರಣ ಮಳಿಗೆಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು, ಕೇವಲ 30 ಸೆಕೆಂಡ್ ನಲ್ಲಿ 70 ಲಕ್ಷ ಮೌಲ್ಯದ ಚಿನ್ನ ದರೋಡೆಮಾಡಿ ಪರಾರಿಯಾಗಿದ್ದಾರೆ.
ಮೂವರಲ್ಲಿ ಓರ್ವ ಬೈಕ್ ಬಳಿ ಇದ್ರೆ, ಇನ್ನೊಬ್ಬ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಮತ್ತೊರ್ವ ಚಿನ್ನಾಭರಣ ಚೀಲದಲ್ಲಿ ತುಂಬಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ತಡರಾತ್ರಿ ಮಳಿಗೆಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ.
Poll (Public Option)

Post a comment
Log in to write reviews