ಟಾಪ್ 10 ನ್ಯೂಸ್
ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗುತ್ತಿರುವೆ: ಕೇಜ್ರಿವಾಲ್ ಭಾವುಕ ಸಂದೇಶ

ನವದೆಹಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅವಧಿ ಜೂ.2ಕ್ಕೆ ಮುಗಿಯಲಿದ್ದು, ಮತ್ತೆ ತಿಹಾರ್ ಜೈಲಿಗೆ ಮರಳಬೇಕಿದೆ.
ನಾನು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗುತ್ತಿರುವುದಕ್ಕೆ ಹೆಮ್ಮೆಯಿದೆ ಎಂದು ಅರವಿಂದ್ ಕೇಜ್ರಿವಾಲ್ ಭಾವುಕ ಸಂದೇಶವನ್ನುಹಂಚಿಕೊಂಡಿದ್ದಾರೆ.
ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ನಾಳೆ 21 ದಿನ ಮುಕ್ತಾಯಗೊಳ್ಳಲಿದೆ. ಮರುದಿನ ನಾನು ಶರಣಾಗತನಾಗಬೇಕಿದೆ. ಅವರು ಈ ಬಾರಿ ನನ್ನನ್ನು ಎಷ್ಟು ದಿನ ಜೈಲಿನಲ್ಲಿರಿಸಿಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ. ನಾನು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗುತ್ತಿದ್ದೇನೆ. ನನಗಿದಕ್ಕೆ ಹೆಮ್ಮೆಯಿದೆ. ಅವರು ಹಲವಾರು ಬಾರಿ ನನ್ನನ್ನು ಬಗ್ಗಿಸಲು ಹಾಗೂ ನಾನು ಅವರ ಮುಂದೆ ತಲೆ ಬಾಗುವಂತೆ ಮಾಡಲು ಪ್ರಯತ್ನಿಸಿದರು. ಆದರೆ, ನಾನು ಬಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
Poll (Public Option)

Post a comment
Log in to write reviews