ರಾಜಕೀಯ
ಬಿಜೆಪಿ ಟಿಕೆಟ್ ಹಂಚಿಕೆಗೆ ಗಾಡ್ ಫಾದರ್ ಸಂಸ್ಕೃತಿ ಬಂದಿದೆ; ಮಾಜಿ ಶಾಸಕ ರಘುಪತಿ ಭಟ್

ರಾಜ್ಯ ಬಿಜೆಪಿಯಲ್ಲಿ ಈ ಹಿಂದೆ ಯಾವುದೇ ಚುನಾವಣೆ ಟಿಕೆಟ್ ನೀಡಬೇಕೆಂದರೂ ಬೂತ್ ಮಟ್ಟದಲ್ಲಿ ಹೆಸರು ಚರ್ಚೆಯಾಗಿ ಮೇಲ್ಮಟ್ಟಕ್ಕೆ ಹೋಗುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಮಾದರಿಯಲ್ಲಿಯೇ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೂ ಬಂದಿದೆ ಎಂದು ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮೇ 18ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್ 3ರ ಚುನಾವಣೆಯಲ್ಲಿ ನನಗೆ ಮತ ಹಾಕಿ ಕೆಲಸ ಮಾಡಲು ಅವಕಾಶ ಕೊಡಿ. ಜನಪ್ರತಿನಿಧಿಯಾಗಿ 2001ರಿಂದ 2018ರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಉಡುಪಿ 2004ರ ಮುಂಚೆ ಹೇಗಿತ್ತು, ಈಗ ಹೇಗಿದೆ ಅನ್ನೋದೇ ನನ್ನ ಕೆಲಸಕ್ಕೆ ಸಾಕ್ಷಿ. 2004ರ ಪೂರ್ವ ಉಡುಪಿಯ ರಸ್ತೆಗಳಲ್ಲಿ ಎರಡು ಬಸ್ ಗಳು ಒಟ್ಟಿಗೆ ಪಾಸ್ ಆಗುವ ವ್ಯವಸ್ಥೆಯಿರಲಿಲ್ಲ. ವಿ. ಎಸ್. ಆಚಾರ್ಯ ಮಾರ್ಗದರ್ಶನದಲ್ಲಿ ಚತುಷ್ಪತ ರಸ್ತೆ ಮೊದಲು ಆರಂಭ ಮಾಡಿದ್ದು ನಾನು. ಈ ಸಾಧನೆಯ ಆಧಾರದಲ್ಲಿ ಮತ ಯಾಚಿಸುತ್ತಿದ್ದೇನೆ ಎಂದು ಹೇಳಿದರು.
Poll (Public Option)

Post a comment
Log in to write reviews