2024-09-19 04:36:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದೇವರ ಸಾಂಗ್ ರಿಲೀಸ್‌ಗೆ ಡೇಟ್ ಫಿಕ್ಸ್

ದೇವರ ಪಾರ್ಟ್ 1' ಬಹುನಿರೀಕ್ಷಿತ ಚಿತ್ರ. ಸೌತ್​ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಮುಖ್ಯಭೂಮಿಕೆಯ ಈ ಆ್ಯಕ್ಷನ್ ಥ್ರಿಲ್ಲರ್ ಸೆಪ್ಟೆಂಬರ್ 27 ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಬಿಡುಗಡೆಯ ದಿನಾಂಕ ಹತ್ತಿರಬರುತ್ತಿದ್ದಂತೆ , ಚಿತ್ರ ತನ್ನ ಪ್ರಮೋಶನ್​ ಚುರುಕುಗೊಳಿಸಿದೆ. ಸಿನಿಮಾದ ಅಪ್ಡೇಟ್ಸ್, ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಇದೀಗ, ಚಿತ್ರದ ಎರಡನೇ ಹಾಡಿನ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಹಿರಂಗಪಡಿಸಿದ್ದು, ಪ್ರೇಕ್ಷಕರ ಉತ್ಸಾಹ ಹೆಚ್ಚಾಗಿದೆ

ಇಂದು ಜಾಹ್ನವಿ ಕಪೂರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್, ಜಾಹ್ನವಿ ಹಾಗೂ ಜೂನಿಯರ್ ಎನ್‌ಟಿಆರ್ ಅವರನ್ನೊಳಗೊಂಡಿದೆ. ಸಖತ್​ ರೊಮ್ಯಾಂಟಿಕ್ ಭಂಗಿಯಲ್ಲಿ ಜೋಡಿ ಕಾಣಿಸಿಕೊಂಡಿದೆ. ಪೋಸ್ಟರ್ ಜೊತೆಗೆ, "ಬಹು ನಿರೀಕ್ಷಿತ ದೇವರ ಚಿತ್ರದ ಎರಡನೇ ಹಾಡು ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ. ಸೆಪ್ಟೆಂಬರ್​ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

 ದೇವರ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕೆಲವೇ ಕೆಲ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ದೇವರ ಭಾಗ 1ರಲ್ಲಿ ಜಾಹ್ನವಿ ಕಪೂರ್ ಮಹಿಳಾ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಾಲಿವುಡ್​ ನಟಿಗಿದು ಚೊಚ್ಚಲ ಟಾಲಿವುಡ್​ ಚಿತ್ರ. ಅಲ್ಲದೇ ಇದೇ ಮೊದಲ ಬಾರಿಗೆ ಆರ್​ಆರ್​ಅರ್​ ಖ್ಯಾತಿಯ ಜೂನಿಯರ್​ ಎನ್​​ಟಿಆರ್​ ಜೊತೆ ತೆರೆಹಂಚಿಕೊಂಡಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್ ಹಿರೋ ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ವಿಲನ್​​ ರೋಲ್​ ನಿಭಾಯಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ ಕೊನೆಗೆ ತೆರೆಕಾಣಲಿದ್ದು, ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

Post a comment

No Reviews