
ವಿಧಾನ ಪರಿಷತ್: ಧರ್ಮರಾಯ ಸ್ವಾಮಿ ದೇವಾಲಯದ ಜಾಗ ಒತ್ತುವರಿ ತೆರವಿಗೆ ಸಂಬಧಿಸಿದಂತೆ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ನೀಡಿದ ಉತ್ತರದಿಂದ ಅಸಮಾಧಾನಗೊಂಡ ಸದಸ್ಯ ಎನ್.ರವಿಕುಮಾರ್ ಅವರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು.
ಧರ್ಮರಾಯಸ್ವಾಮಿ ದೇವಾಲಯಕ್ಕೆ ನೀಲಸಂದ್ರ ಗ್ರಾಮದ ಸರ್ವೆ ಸಂಖ್ಯೆ 79ರಲ್ಲಿ 15 ಎಕರೆ ಜಮೀನು ನೀಡಲಾಗಿದ್ದು, ಆ ಜಮೀನು ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸಿ ಜಮೀನಿಗೆ ಕಂಪೌಂಡ್ ಹಾಕಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇಕ್ರಮ ಕೈಗೊಳ್ಳುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಅಧಿಕಾರಿಗಳಿಂದ ತಪ್ಪಾಗಿದೆ. ಕೂಡಲೇ ಕೇಸು ತೆರವುಗೊಳಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ಈ ಉತ್ತರಕ್ಕೆ ತೃಪ್ತರಾಗದ ರವಿ ಕುಮಾರ್ ಇಷ್ಟು ಸಮಯದಿಂದ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ನಮ್ಮ ಸರ್ಕಾರ ಇದ್ದಾಗ ಏಕೆ ತೆರವು ಮಾಡಿಸಿಕೊಳ್ಳಲಿಲ್ಲ ಎಂದು ಮರು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಅವರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಮಿ ಹಾಗೂ ಸದಸ್ಯ ಭೋಜೇಗೌಡ ಅವರನ್ನು ತಮ್ಮ ಕುರ್ಚಿಗೆ ತೆರಳುವಂತೆ ಸಮಾಧಾನ ಪಡಿಸಿದರು.
Poll (Public Option)

Post a comment
Log in to write reviews