
ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಮೇ ೯ರಂದು ಕೊಡಗು ಜಿಲ್ಲೆಯ ಸೂರ್ಲಬಿಯಲ್ಲಿ ನಡೆದಿದೆ.
ಆರೋಪಿ ಯುವಕನೊಂದಿಗೆ ಬಾಲಕಿಗೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ ಪೊಲೀಸರ ಮಧ್ಯಸ್ಥಿಕೆಯಿಂದ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದರಿಂದ ಕೋಪಗೊಂಡ ಯುವಕ ಮೇ ೯ರ ಸಂಜೆಯಾಗುತ್ತಿದ್ದಂತೆಯೆ ಬಾಲಕಿಯನ್ನು ಆಕೆಯ ಮನೆಯಿಂದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾನೆ. ಬಳಿಕ ಆಕೆಯ ರುಂಡ ಕಡಿದು ದೇಹವನ್ನು ಅಲ್ಲೆ ಬಿಟ್ಟು ರುಂಡವನ್ನು ತನ್ನೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾನೆ.ಬಾಲಕಿಯ ಭೀಕರ ಹತ್ಯೆಯ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಕೊಡಗು ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದಾರೆ.
Poll (Public Option)

Post a comment
Log in to write reviews