
ಬೆಂಗಳೂರು: ಬ್ಯಾಟರಾಯನಪುರ ಮತಗಟ್ಟೆಯೊಳಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆಂದು ಆರೋಪಿಸಿ ಸಚಿವ ಕೃಷ್ಣಭೈರೇಗೌಡ ಅವರರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆಯಿತು.
ಪದವೀಧರ ಚುನಾವಣೆ ಸಂಬಂಧ ಸಚಿವ ಕೃಷ್ಣಭೈರೇಗೌಡ ಬ್ಯಾಟರಾಯನಪುರ ಮತಗಟ್ಟೆಯ ಒಳಗೆ ತೆರಳಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆಯಲ್ಲಿ ಮತಗಟ್ಟೆ ಒಳಗೆ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದರು.
Poll (Public Option)

Post a comment
Log in to write reviews