2024-12-24 07:26:46

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗೀಸರ್‌ ಗ್ಯಾಸ್‌ ಸೋರಿಕೆ: ತಾಯಿ ಮಗ ಸಾವು

ರಾಮನಗರ: ಬಾತ್‌ರೂಮ್‌ನಲ್ಲಿ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿದ್ದರಿಂದ ಉಸಿರುಗಟ್ಟಿ ತಾಯಿ-ಮಗ ಇಬ್ಬರೂ ಮೃತಪಟ್ಟಿರುವ ಘಟನೆ ನಿನ್ನೆ (ಜುಲೈ 21) ಜಿಲ್ಲೆಯ ಮಾಗಡಿಯ ಜ್ಯೋತಿ ನಗರದಲ್ಲಿ ನಡೆದಿದೆ.

ಶೋಭಾ (40), ದಿಲೀಪ್ (17) ಮೃತ ದುರ್ದೈವಿಗಳು. ದಿಲೀಪ್‌ ಸ್ನಾನಕ್ಕಾಗಿ ನೀರು ಕಾಯಿಸಲು ಗ್ಯಾಸ್ ಗೀಜರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದ. ಸುಮಾರು ಸಮಯದವರೆಗೂ ಮಗ ಬಾರದೇ ಇದ್ದಾಗ, ಆತನನ್ನು ನೋಡಲು ಬಾತ್‌ರೂಮ್‌ಗೆ ತಾಯಿ ಶೋಭಾ ಬಂದಿದ್ದಾರೆ. ಈ ವೇಳೆ ವಿಷ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ತಾಯಿ ಮಗ ಇಬ್ಬರು ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post a comment

No Reviews