2024-11-08 12:32:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಆರ್​ಬಿಐ ಅಂದುಕೊಂಡಷ್ಟೆಲ್ಲ ಜಿಡಿಪಿ ಈಗ ಬೆಳೆಯಲ್ಲ: ನೊಮುರಾ ಹೇಳಿಕೆ

ನವದೆಹಲಿ :ಹಲವು ಬ್ರೋಕರೇಜ್ ಸಂಸ್ಥೆಗಳು ಹಾಗೂ ಆರ್​ಬಿಐ ಮೊದಲಾದ ಸಂಸ್ಥೆಗಳು ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ಶೇ. 7ರ ದರದ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಅಂದಾಜು ಮಾಡಿವೆ. ಆದರೆ, ಜಪಾನ್​ನ ಬ್ರೋಕರೇಜ್ ಸಂಸ್ಥೆ ನೊಮುರಾ ಭಿನ್ನ ರಾಗ ಹಾಡುತ್ತಿದೆ. ಭಾರತದ ಆರ್ಥಿಕತೆ ಆವರ್ತಕ ನಿಧಾನಗತಿಯ ಚಕ್ರದ (cyclical slowdown) ಆರಂಭದಲ್ಲಿದೆ. ಜಿಡಿಪಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ವೇಗದಲ್ಲಿ ಬೆಳೆಯುತ್ತದೆ ಎಂದು ನೊಮುರಾ ಅಭಿಪ್ರಾಯಪಟ್ಟಿದೆ.

2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ 7.2ರಷ್ಟು ಹೆಚ್ಚಾಗಬಹುದು ಎಂದು ಆರ್​ಬಿಐ ಮಾಡಿದ್ದ ಅಂದಾಜನ್ನು ನೊಮುರಾ ಸಾರಸಗಟಾಗಿ ತಳ್ಳಿಹಾಕಿದೆ. ಆರ್​ಬಿಐ ತೀರಾ ಹೆಚ್ಚು ಆಶಾದಾಯಕವಾಗಿದೆ. ಭಾರತದ ಆರ್ಥಿಕತೆ ಅಷ್ಟು ವೇಗದಲ್ಲಿ ಹೆಚ್ಚಾಗಲ್ಲ. 2024-25ರಲ್ಲಿ ಜಿಡಿಪಿ ದರ ಶೇ. 6.7ಕ್ಕಿಂತಲೂ ಕಡಿಮೆ ಇರಬಹುದು. 2025-26ರಲ್ಲಿ ಶೇ. 6.8 ರಷ್ಟಾಗಬಹುದು ಎಂದು ಜಪಾನ್ ಮೂಲದ ಈ ಬ್ರೋಕರೇಜ್ ಸಂಸ್ಥೆ ಹೇಳಿದೆ.

ನಗರವಾಸಿಗಳ ಅನುಭೋಗ ಪ್ರಮಾಣ ಇಳಿಮುಖ

ಭಾರತದ ನಗರಭಾಗದ ಅನುಭೋಗ ಸೂಚಕಗಳು (ಜನರ ವೆಚ್ಚ) ಇತ್ತೀಚೆಗೆ ಕಡಿಮೆ ಮಟ್ಟವನ್ನು ಬೊಟ್ಟು ಮಾಡುತ್ತಿವೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಮುಖ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ, ಎಫ್​ಎಂಸಿಜಿ ಕಂಪನಿಗಳಿಗೆ ನಗರಭಾಗದಲ್ಲಿ ಬಿಸಿನೆಸ್ ಇಳಿಮುಖವಾಗುತ್ತಿರುವುದು, ಇತ್ಯಾದಿ ಸಂಗತಿಗಳನ್ನು ನೊಮುರಾ ತನ್ನ ಅನಿಸಿಕೆಗೆ ಸೇರಿಸಿಕೊಂಡಿದೆ.

ಕಂಪನಿಗಳು ತಮ್ಮ ಸಂಬಳ ವೆಚ್ಚವನ್ನು ಕಡಿಮೆ ಮಾಡುತ್ತಿವೆ. ಲಿಸ್ಟೆಡ್ ಕಂಪನಿಗಳ ವೇತನ ವೆಚ್ಚವು ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಶೇ. 0.8ರಷ್ಟು ಮಾತ್ರ ಹೆಚ್ಚಾಗಿದೆ. ಜೂನ್ ಕ್ವಾರ್ಟರ್​ನಲ್ಲಿ ಇದು ಶೇ. 1.2 ಇತ್ತು. 2023-24ರಲ್ಲಿ ಶೇ. 2.5, 2022-23ರಲ್ಲಿ ಶೇ. 10.8ರಷ್ಟು ವೇತನ ವೆಚ್ಚ ಹೆಚ್ಚಳವಾಗಿತ್ತು ಎಂದು ನೊಮುರಾ ವಿಶ್ಲೇಷಿಸಿದೆ.

ಕೋವಿಡ್ ನಂತರ ಹೆಚ್ಚಿದ್ದ ಬೇಡಿಕೆ ಈಗ ಮಂದಗೊಂಡಿದೆ. ಹಣಕಾಸು ನೀತಿ ಬಿಗಿಯಾಗಿದೆ. ಅಸುರಕ್ಷಿತ ಸಾಲಗಳ ಮೇಲೆ ಆರ್​ಬಿಐ ಹಾಕಿರುವ ಬಿಗಿಪಟ್ಟುಗಳಿಂದಾಗಿ ಪರ್ಸನಲ್ ಲೋನ್ ಕಡಿಮೆ ಆಗಿದೆ. ಎನ್​ಬಿಎಫ್​ಸಿಗಳ ಬಿಸಿನೆಸ್ ಕಡಿಮೆ ಆಗಿದೆ ಎಂದು ಈ ಬ್ರೋಕರೇಜ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

Post a comment

No Reviews