2024-12-24 07:42:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರತದ ಅತ್ಯಂತ ಶ್ರೀಮಂತ ಅಂಬಾನಿಯನ್ನೇ ಹಿಂದಿಕ್ಕಿದ ಗೌತಮ್ ಅದಾನಿ

ಮುಂಬೈ: ಹುರುನ್ ಇಂಡಿಯಾವು ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದ್ದು, ರಿಲಯನ್ಸ್ ನ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಗೌತಮ್ ಅದಾನಿ ಅತ್ಯಂತ ಶ್ರೀಮಂತ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 11.6 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ 2024 ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಜುಲೈ 31, 2024 ರವರೆಗಿನ ಸಂಪತ್ತಿನ ಲೆಕ್ಕಾಚಾರದಂತೆ ಪಟ್ಟಿ ಬಿಡುಗಡೆ ಮಾಡಲಾಗಿದೆ. “ಭಾರತವು ಏಷ್ಯಾದ ಸಂಪತ್ತು ಸೃಷ್ಟಿ ಇಂಜಿನ್ ಆಗಿ ಹೊರಹೊಮ್ಮುತ್ತಿದೆ! ಚೀನಾ ತನ್ನ ಬಿಲಿಯನೇರ್‌ (ಶತಕೋಟ್ಯಾಧಿಪತಿ)ಗಳ ಸಂಖ್ಯೆಯಲ್ಲಿ 25% ಕುಸಿತವನ್ನು ಕಂಡರೆ, ಭಾರತದಲ್ಲಿ ಬಿಲಿಯನೇರ್‌ ಗಳ ಸಂಖ್ಯೆ ದಾಖಲೆಯ 334ಕ್ಕೆ ತಲುಪಿದೆ" ಎಂದು ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.

Post a comment

No Reviews